Publish Date: Wed, 23 Aug 2023 (20:27 IST)
Updated Date: Wed, 23 Aug 2023 (20:28 IST)
ಡುಬ್ಲಿನ್: ಭಾರತ ಮತ್ತು ಐರ್ಲೆಂಡ್ ನಡುವಿನ ಮೂರನೇ ಟಿ20 ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು, ಇನ್ನೂ ಪಂದ್ಯ ಆರಂಭವಾಗಿಲ್ಲ.
ಮಳೆಯಿಂದಾಗಿ ಇಂದು ನಿಗದಿತ ಸಮಯಕ್ಕೆ ಟಾಸ್ ಕೂಡಾ ನಡೆದಿಲ್ಲ. ಮಳೆ ಇನ್ನೂ ನಿಂತಿಲ್ಲ. ಹೀಗಾಗಿ ಇಂದು ಪಂದ್ಯ ನಡೆಯುವ ಸಾಧ‍್ಯತೆ ತೀರಾ ಕಡಿಮೆ ಎನ್ನಬಹುದು. ಒಂದು ವೇಳೆ ಪಂದ್ಯ ರದ್ದಾದರೂ ಟೀಂ ಇಂಡಿಯಾ ಈಗಾಗಲೇ ಸರಣಿಯಲ್ಲಿ 2-0 ಅಂತರದ ಮುನ್ನಡೆ ಸಾಧಿಸಿರುವುದರಿಂದ ಸರಣಿ ತನ್ನದಾಗಿಸಿಕೊಳ್ಳಲಿದೆ.
ಇಂದು ಭಾರತೀಯರೆಲ್ಲರೂ ಹೆಮ್ಮೆ ಪಡುವಂತಹ ಚಂದ್ರಯಾನ 3 ಯಶಸ್ವಿಯಾಗಿದ್ದು, ಈ ಐತಿಹಾಸಿಕ ಘಟನೆಯನ್ನು ಟೀಂ ಇಂಡಿಯಾ ಆಟಗಾರರೂ ಕಣ್ತುಂಬಿಕೊಂಡರು. ಬುಮ್ರಾ ಪಡೆ ಮೈದಾನದ ಪಕ್ಕದಲ್ಲೇ ಇದ್ದ ಟಿವಿಯಲ್ಲಿ ಚಂದ್ರಯಾನ 3 ಲ್ಯಾಂಡರ್ ಲ್ಯಾಂಡ್ ಆಗುವುದನ್ನು ವೀಕ್ಷಿಸಿ ಸಂಭ್ರಮಿಸಿದ್ದಾರೆ. ಈ ಕ್ಷಣಗಳನ್ನು ಬಿಸಿಸಿಐ ಹಂಚಿಕೊಂಡಿದೆ.