ಕಾಮನ್ ವೆಲ್ತ್ ಗೇಮ್ಸ್: ಚಿನ್ನ ಗೆದ್ದ ಚಾನು, ಬೆಳ್ಳಿ ಗೆದ್ದ ಕನ್ನಡಿಗ

ಶುಕ್ರವಾರ, 6 ಏಪ್ರಿಲ್ 2018 (09:32 IST)
ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 21 ಕಾಮನ್‍ ವೆಲ್ತ್ ಗೇಮ್ಸ್ ಕೂಟದಲ್ಲಿ ಭಾರತ ಇದುವರೆಗೆ ಮೂರು ಚಿನ್ನ ಗೆದ್ದುಕೊಂಡಿದೆ.

ಇಂದು  ಬೆಳಿಗ್ಗೆ ನಡೆದ 53 ಕೆಜಿ ವಿಭಾಗದ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸಂಜಿತಾ ಚಾನು ಚಿನ್ನ ಗೆದ್ದಿದ್ದಾರೆ. 48 ಕೆಜಿ ವಿಭಾಗದ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮಣಿಪುರದ ಮೀರಾಬಾಯಿ ಚಾನು ಚಿನ್ನ ಗೆದ್ದುಕೊಂಡಿದ್ದಾರೆ. ಕನ್ನಡಿಗ ಗುರು 56 ಕೆಜಿ ವಿಭಾಗದ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗಳಿಸಿದ್ದಾರೆ.

ಇದರೊಂದಿಗೆ ಭಾರತದ ಪದಕದ ಸಂಖ್ಯೆ ಮೂರಕ್ಕೇರಿದೆ. ಉಳಿದಂತೆ ಬ್ಯಾಡ್ಮಿಂಟನ್ ನಲ್ಲಿ ಭಾರತ ಸೈನಾ ನೆಹ್ವಾಲ್-ಕೆ ಶ್ರೀಕಾಂತ್ ಮಿಶ್ರ ಡಬಲ್ಸ್ ನಲ್ಲಿ ಅಶ್ವಿನಿ ಪೊನ್ನಪ್ಪ-ಋತ್ವಿಕಾ ಮುನ್ನಡೆ ಸಾಧಿಸಿದ್ದು, ಪದಕದ ಆಸೆ ಹುಟ್ಟಿಸಿದ್ದಾರೆ. ಒಟ್ಟಾರೆ ಇದುವರೆಗೆ ಭಾರತದ ಪ್ರದರ್ಶನ ಆಶಾದಾಯಕವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಾರ್ವಜನಿಕವಾಗಿ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಕೇರಳದ ಮಧು ಕುಟುಂಬಕ್ಕೆ ಮಿಡಿದ ಕ್ರಿಕೆಟಿಗ ಸೆಹ್ವಾಗ್