Publish Date: Sat, 10 Mar 2018 (14:53 IST)
Updated Date: Sat, 10 Mar 2018 (14:59 IST)
ಸೋಲ್: ದಕ್ಷಿಣ ಕೊರಿಯಾದ ಬ್ಯಾಡ್ಮಿಂಟನ್ ಆಟಗಾರ ಚುಂಗ್ ಜೇ ಸುಂಗ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕೊರಿಯಾ ಬ್ಯಾಡ್ಮಿಂಟನ್ ಸಂಸ್ಥೆ ತಿಳಿಸಿದೆ. ಚುಂಗ್ ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಚುಂಗ್, 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಸಾಧನೆ ಮಾಡಿದ್ದರು. ಪುರುಷರ ಡಬಲ್ಸ್ ವಿಭಾಗದಲ್ಲಿ ಲೀ ಯೊಂಗ್ ಡೇ ಜೊತೆಗೂಡಿ ಆಡಿದ್ದ ಅವರು ಕಂಚಿನ ಪದಕದ ಹೋರಾಟದಲ್ಲಿ ಮಲೇಷ್ಯಾದ ಕೋ ಕಿಯೆನ್ ಕೀಟ್ ಮತ್ತು ಟಾನ್ ಬೂನ್ ಹೆಯೊಂಗ್ ಅವರನ್ನು ಸೋಲಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ