Select Your Language

Notifications

webdunia
webdunia
webdunia
webdunia

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಾಕಿ ಆಟಗಾರ ಸುನೀಲ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಾಕಿ ಆಟಗಾರ ಸುನೀಲ್
ಮಂಗಳೂರು , ಸೋಮವಾರ, 5 ಮಾರ್ಚ್ 2018 (06:36 IST)
ಮಂಗಳೂರು: ಭಾರತ ಹಾಕಿ ತಂಡದ ಫಾರ್ವರ್ಡ್ ಪ್ಲೇಯರ್ ಆಟಗಾರ, ಒಲಿಂಪಿಯನ್, ಅರ್ಜುನ ಪ್ರಶಸ್ತಿ ವಿಜೇತ ಕೊಡಗಿನ ಎಸ್.ವಿ. ಸುನೀಲ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.


ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಾಲಯದ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ಸುನೀಲ್ ಹಾಗೂ ನಿಶಾ ಅವರು ಹಸೆಮಣೆ ಏರಿದರು. ನಿಶಾ ಮಂಗಳೂರು ಮೂಲದವರು ಕೊಂಚಾಡಿ ಗ್ರಾಮದ ತಾರನಾಥ-ಸುನಿತಾ ದಂಪತಿಯ ಪುತ್ರಿಯಾಗಿದ್ದು, ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ.


ಸೋಮವಾರ ಮಡಿಕೇರಿಯ ಕಾವೇರಿ ಹಾಲ್‍ನಲ್ಲಿ ಆರತಕ್ಷತೆ ನಡೆಯಲಿದ್ದು, ಸ್ನೇಹಿತರು, ಭಾರತ ಹಾಕಿ ತಂಡದ ಆಟಗಾರರು, ಪಾಲ್ಗೊಳ್ಳಲಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೃದಯಾಘಾತದಿಂದ ಡೇವಿಡ್ ಆಸ್ಟೋರಿ ಸಾವು