Select Your Language

Notifications

webdunia
webdunia
webdunia
webdunia

2022 ಕಾಮನ್ ವೆಲ್ತ್ ಗೇಮ್ಸ್ ಗೆ ಕ್ರಿಕೆಟ್ ಸೇರ್ಪಡೆ?

2022 ಕಾಮನ್ ವೆಲ್ತ್ ಗೇಮ್ಸ್ ಗೆ ಕ್ರಿಕೆಟ್ ಸೇರ್ಪಡೆ?
NNewDelhi , ಬುಧವಾರ, 26 ಏಪ್ರಿಲ್ 2017 (09:57 IST)
ನವದೆಹಲಿ: ಫುಟ್ ಬಾಲ್ ಬಿಟ್ಟರೆ ಜನಕ್ಕೆ ಹೆಚ್ಚು ಕ್ರೇಜ್ ಇರುವುದು ಕ್ರಿಕೆಟ್ ನಲ್ಲಿ. ಹಾಗಿದ್ದರೂ, ವಿಶ್ವದ ಪ್ರಮುಖ ಕ್ರೀಡಾ ಕೂಟಗಳಲ್ಲಿ ಕ್ರಿಕೆಟ್ ಗೆ ಸ್ಥಾನವಿಲ್ಲ. ಆದರೆ 2022 ರ ವೇಳೆಗೆ ಅದೂ ಸಾಧ್ಯವಾಗಬಹುದು.

 
ಬರ್ಮಿಂಗ್ ಹ್ಯಾಮ್ ನಲ್ಲಿ 2022 ರ ಕಾಮನ್ ವೆಲ್ತ್ ಗೇಮ್ಸ್ ನಡೆಯಲಿದೆ. ಈ ಸಂದರ್ಭಕ್ಕಾಗುವಾಗ ಕ್ರಿಕೆಟ್ ನ್ನು ಸೇರಿಸಿಕೊಳ್ಳಲು ಅಲ್ಲಿನ ಕಾಮನ್ ವೆಲ್ತ್ ಗೇಮ್ಸ್ ಆಯೋಜಕರು ಉತ್ಸುಕರಾಗಿದ್ದಾರೆ.

ಇದಕ್ಕೆ ಐಸಿಸಿ ಮತ್ತು ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆ ಸಹಕರಿಸಬೇಕಿದೆ. ಒಂದು ವೇಳೆ ಒಪ್ಪಿದರೆ ಎಡ್ಜ್ ಬಾಸ್ಟನ್ ಮತ್ತು ವಾರ್ಸೆಸ್ಟರ್ ಶೇರ್ ಮೈದಾನಗಳಲ್ಲಿ ಕ್ರಿಕೆಟ್ ಆಯೋಜಿಸಲು ಸಮಿತಿ ಚಿಂತನೆ ನಡೆಸಿದೆ. ಯಾವುದಕ್ಕೂ ಕ್ರಿಕೆಟ್ ದೊರೆಗಳು ಮನಸು ಮಾಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾದ ಹಳೆ ಹುಲಿಯನ್ನು ಕರೆಸಿಕೊಂಡ ಗುಜರಾತ್ ಲಯನ್ಸ್