Select Your Language

Notifications

webdunia
webdunia
webdunia
webdunia

ವಾಂಖೆಡೆ ಸ್ಟೇಡಿಯಂನಲ್ಲಿ ಕ್ರಿಕೆಟ್ ದೇವರ ಪ್ರತಿಮೆ..!

ವಾಂಖೆಡೆ ಸ್ಟೇಡಿಯಂನಲ್ಲಿ ಕ್ರಿಕೆಟ್ ದೇವರ ಪ್ರತಿಮೆ..!
ಮುಂಬೈ , ಮಂಗಳವಾರ, 24 ಅಕ್ಟೋಬರ್ 2023 (10:48 IST)
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಲೋಕದಲ್ಲಿ ಹೊಸ ಭಾಷ್ಯವನ್ನು ಬರೆದವರು.. ಸಾಧನೆಗಳ ಸಿಖರವನ್ನ ಏರಿದವರು.. ೨೦೧೧ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವರು. ಹೀಗೆ ಎರಡು ದಶಕಗಳ ಕಾಲ ಕ್ರಿಕೆಟ್ ಜಗತ್ತುನ್ನು ಆಳಿದ ಈ ಕ್ರಿಕೆಟ್ ದೇವರಿಗೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪ್ರತಿಮೆಯನ್ನು ನಿರ್ಮಿಸಿ ಅನಾವರಣಗೊಳಿಸಲಾಗ್ತಿದೆ..
 
ಹೌದು ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಶ್ರೀಲಂಕಾ-ಭಾರತ ಪಂದ್ಯಕ್ಕೂ ಮುನ್ನಾ ದಿನ ಸಚಿನ್ ತೆಂಡೂಲ್ಕರ್ ಅವರ ಪ್ರತಿಮೆ ಅನಾವರಣಗೊಳಿಸಲು ನಿರ್ಧರಿಸಲಾಗಿದೆ. ಭಾರತ ಕ್ರಿಕೆಟ್ ತಂಡಕ್ಕೆ ಸಚಿನ್ ಹಲವು ಭಾರೀ ಕ್ಲಿಷ್ಟಕರ ಸಮಯದಲ್ಲಿ ಆಸರೆಯಾಗಿ, ಪಂದ್ಯವನ್ನು ಗೆಲ್ಲಿಸಿ, ಆಪತ್ಭಾಂದವರಾಗಿದ್ದಾರೆ. ಇದಲ್ಲದೇ ಭಾರತದ ಪರವಾಗಿ ಕ್ರಿಕೆಟ್ ಜಗತ್ತೇ ಮೆಚ್ಚುವ ಹಾಗೇ, ಹಲವು ಐತಿಹಾಸಿಕ ದಾಖಲೆಯನ್ನು ನಿರ್ಮಿಸಿ, ದೇಶದ ಹಿರಿಮೆಯನ್ನು ಉತ್ತುಂಗಕ್ಕೆ ಕೊಂಡೋಯ್ಯುದ್ದಿದ್ದಾರೆ. ಹಾಗಾಗಿ ಈ ಕ್ರಿಕೆಟ್ ದೇವರಿಗೊಂದು ಪ್ರೀತಿಯ, ಅಭಿಮಾನದ ಗೌರವನ್ನು ನೀಡಲು, ವಾಂಖೆಡೆ ಮೈದಾಣದಲ್ಲಿ ಅವರದ್ದೇ ಸ್ಟಾö್ಯಚು ಅನಾವರಣ ಮಾಡಲಾಗ್ತಿದೆ..
 
ಭಾರತದ ಆತಿಥ್ಯದಲ್ಲೇ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ವಿಶೇಷ ಗೌರವ ಕೊಡುವ ನಿಟ್ಟಿನಲ್ಲಿ ಕ್ರಿಕೆಟ್ ದೇವರೆಂದೇ ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್‌ಗೇ ಅವರ ಪ್ರತಿಮೆ ಅನಾವರಣಗೊಳಿಸಲು, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಿದ್ಧತೆ ನಡೆಯುತ್ತಿದೆ. ಸಿಂಹಳಿಯರ ವಿರುದ್ಧದ ಪಂದ್ಯಕ್ಕೂ ಒಂದು ದಿನ ಮುಂಚಿತವಾಗಿ ಈ ಗೌರವವನ್ನು ನೀಡಲು ನಿರ್ಧರಿಸಲಾಗಿದೆ.
 
ವಾಂಖೆಡೆ ಸ್ಟೇಡಿಯಂನ ಒಂದು ಸ್ಟಾಂಡ್‌ಗೆ ಸಚಿನ್ ಅವರ ಹೆಸರು ಇಡಲಾಗಿದೆ... ಆದ್ರೆ ಇವಾಗ ಮುಂಬೈ ಕ್ರಿಕೆಟ್ ಸಂಸ್ಥೆ ಸಚಿನ್ ಸಾಧನೆಗೆ ಜೀವಮಾನದ ಪ್ರತಿಮೆ ನಿರ್ಮಿಸಿದೆ. ಅದೇನೇ ಇರಲಿ ಸಚಿನ್ ಅವರ ಕ್ರೀಡಾ ಸಾಧನೆಯನ್ನು ಮೆಚ್ಚಿ ಮುಂದಿನ ತಿಂಗಳು ನವೆಂಬರ್ ೧ರಂದು ಇವರ ಪ್ರತಿಮೆಯನ್ನು ಅನಾವರಣ ಮಾಡಲಾಗ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾದಿಂದ ಕ್ರಿಕೆಟಿಗರಿಗೆ 2 ದಿನ ರಜೆ: ಕುಟುಂಬದವರ ಜೊತೆಗಿರಲು ಅವಕಾಶ