Publish Date: Mon, 23 Oct 2023 (18:40 IST)
Updated Date: Mon, 23 Oct 2023 (18:42 IST)
ನವದೆಹಲಿ: ಭಾರತೀಯ ಕ್ರಿಕೆಟ್ ರಂಗ ಕಂಡ ಶ್ರೇಷ್ಠ ಸ್ಪಿನ್ನರ್ ಗಳಲ್ಲಿ ಒಬ್ಬರಾಗಿರುವ ಬಿಷನ್ ಸಿಂಗ್ ಬೇಡಿ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.
ಪಂಜಾಬ್ ನ ಅಮೃತಸರ ಮೂಲದವರಾದ ಬಿಷನ್ ಸಿಂಗ್ ಬೇಡಿ ಭಾರತದ ಪರ 67 ಟೆಸ್ಟ್ ಪಂದ್ಯಗಳನ್ನಾಡಿ 266 ವಿಕೆಟ್ ಸಂಪಾದಿಸಿದ್ದರು. 14 ಬಾರಿ ಐದು ವಿಕೆಟ್ ಗಳ ಗೊಂಚಲು ಪಡೆದಿದ್ದರು.
ಎರಡು ವಾರಗಳ ಹಿಂದೆ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ಸೇರಿದ್ದ ಬೇಡಿಗೆ ಶಸ್ತ್ರಚಿಕಿತ್ಸೆಯೂ ನಡೆದಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತರು ಪತ್ನಿ ಅಂಜು, ಪುತ್ರ, ನಟ ಅಂಗದ್ ಬೇಡಿ ಮತ್ತು ಸೊಸೆ ನೇಹಾ ದುಪಿಯಾ ಸೇರಿದಂತೆ ಬಂಧು ಬಳಗದವನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಬಾಲಿವುಡ್, ಕ್ರೀಡಾ ಲೋಕದ ದಿಗ್ಗಜರು ಕಂಬನಿ ಮಿಡಿದಿದ್ದಾರೆ.