Select Your Language

Notifications

webdunia
webdunia
webdunia
webdunia

Para Olympics 2024: ದಾಖಲೆಯ ಚಿನ್ನ ಗೆದ್ದ ಸುಮಿತ್ ಆಂಟಿಲ್ ಸ್ಪೂರ್ತಿದಾಯಕ ಕತೆ ಕೇಳಿ

Sumit Antil

Krishnaveni K

ಪ್ಯಾರಿಸ್ , ಮಂಗಳವಾರ, 3 ಸೆಪ್ಟಂಬರ್ 2024 (09:51 IST)
Photo Credit: Facebook
ಪ್ಯಾರಿಸ್: ಪ್ಯಾರಾ ಒಲಿಂಪಿಕ್ಸ್ ನಲ್ಲಿ ಭಾರತದ ಜ್ಯಾವೆಲಿನ್ ಥ್ರೋ ಪಟು ಸುಮಿತ್ ಆಂಟಿಲ್ ದಾಖಲೆಯ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.  ಸುಮಿತ್ ಆಂಟಿಲ್ ವಿಕಲಾಂಗರಾಗಿದ್ದು ಹೇಗೆ, ಅವರನ್ನು ಅದನ್ನು ಮೀರಿ ಜ್ಯಾವೆಲಿನ್ ಥ್ರೋ ಪಟುವಾಗಿ ಬೆಳೆದಿದ್ದು ಹೇಗೆ ಎಂಬ ಸ್ಪೂರ್ತಿದಾಯಕ ಕತೆ ಇಲ್ಲಿದೆ ನೋಡಿ.

ಪ್ಯಾರಾ ಒಲಿಂಪಿಕ್ಸ್ ನಲ್ಲಿ ಜ್ಯಾವೆಲಿನ್ ಥ್ರೋ ಎಫ್ 64 ವಿಭಾಗದಲ್ಲಿ ಒಟ್ಟು 70.59 ದೂರ ಎಸೆಯುವ ಮೂಲಕ ಸುಮಿತ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಪ್ಯಾರಾ ಒಲಿಂಪಿಕ್ಸ್ ನಲ್ಲಿಯೇ ಸುಮಿತ್ ಹೊಸ ದಾಖಲೆಯನ್ನೇ ಮಾಡಿದ್ದಾರೆ. ಸುಮಿತ್ ಆಂಟಿಲ್ ಕಳೆದ ಟೋಕಿಯೋ ಒಲಿಂಪಿಕ್ಸ್ ನಲ್ಲೂ 69.50 ಮೀ. ದೂರ ಎಸೆದು ಚಿನ್ನದ ಪದಕ ಗೆದ್ದುಕೊಂಡಿದ್ದರು. ಇದೀಗ ಸತತ ಎರಡನೇ ಬಾರಿ ಈ ಹಿಂದಿನ ದೂರವನ್ನೂ ಮೀರಿ ಚಿನ್ನದ ಪದಕವನ್ನು ಗೆದ್ದು ದಾಖಲೆ ಮಾಡಿದ್ದಾರೆ.

ಹರ್ಯಾಣದ ಖೇವ್ರಾ ಗ್ರಾಮದ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಸುಮಿತ್ ಬಾಲ್ಯದಿಂದಲೂ ಕಷ್ಟಪಟ್ಟು ಮುಂದೆ ಬಂದವರು. ಅವರ ತಂದೆ ವಾಯುಪಡೆಯಲ್ಲಿ ಅಧಿಕಾರಿಯಾಗಿದ್ದರು. ಬಾಲ್ಯದಿಂದಲೇ ಅವರು ಕುಸ್ತಿಪಟುವಾಗಬೇಕೆಂದು ಪರಿಶ್ರಮ ಪಡುತ್ತಿದ್ದರು.  ಆದರೆ ದುರದೃಷ್ಟ ನೋಡಿ 2015 ರಲ್ಲಿ ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದಾಗ ಅಪಘಾತಕ್ಕೀಡಾದರು. ಪರಿಣಾಮ ಅವರ ಮೊಣಕಾಲಿನ ಕೆಳಭಾಗವನ್ನು ಕತ್ತರಿಸಬೇಕಾಯಿತು. ಇದರೊಂದಿಗೆ ಕುಸ್ತಿಪಟುವಾಗಬೇಕೆಂಬ ಅವರ ಕನಸು ಭಗ್ನವಾಯಿತು.

ಆದರೆ ಅಷ್ಟಕ್ಕೇ ಅವರು ಕೈಕಟ್ಟಿ ಕೂರಲಿಲ್ಲ. ಕುಸ್ತಿಪಟುವಾಗಲು ಸಾಧ್ಯವಾಗದೇ ಇದ್ದರೇನಂತೆ, ಮೊದಲು ಶಾಟ್ ಪುಟ್ ಎಸೆತ ಅಭ್ಯಾಸ ಮಾಡಲು ಬಯಸಿದ್ದರು. ಆದರೆ ಜ್ಯಾವೆಲಿನ್ ಕೋಚ್ ನವೆಲ್ ಸಿಂಗ್ ಅವರಿಗೆ ಜ್ಯಾವೆಲಿನ್ ತರಬೇತಿ ನೀಡಿದರು. ಸತತ ಪರಿಶ್ರಮದ ಫಲವಾಗಿ ಅವರು ಇಂದು ಎರಡು ಬಾರಿ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವ ಮೂಲಕ ಇತರರಿಗೂ ಸ್ಪೂರ್ತಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರವೀಂದ್ರ ಜಡೇಜಾಗೆ ಆಡುವ ಬಳಗದಲ್ಲಿ ಅವಕಾಶ ಕೊಟ್ಟರೆ ರವಿಚಂದ್ರನ್ ಅಶ್ವಿನ್ ಗೆ ಹೊಟ್ಟೆಕಿಚ್ಚಾಗುತ್ತಾ