Select Your Language

Notifications

webdunia
webdunia
webdunia
webdunia

ಭಾರತ-ದ.ಆಫ್ರಿಕಾ ಟಿ-20: ಮುಖಾಮುಖಿಯಲ್ಲಿ ಭಾರತವೇ ಮೇಲುಗೈ!

cricket india south africa ಭಾರತ ದ.ಆಫ್ರಿಕಾ ಕ್ರಿಕೆಟ್
bengaluru , ಬುಧವಾರ, 8 ಜೂನ್ 2022 (18:18 IST)
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ 5 ಪಂದ್ಯಗಳ ಟಿ-೨೦ ಸರಣಿ ನಾಳೆಯಿಂದ ಆರಂಭಗೊಳ್ಳಲಿದ್ದು, ಎರಡೂ ಬಲಿಷ್ಠ ತಂಡಗಳ ಮುಖಾಮುಖಿಯಲ್ಲಿ ಭಾರತವೇ ಮೇಲುಗೈ ಸಾಧಿಸಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇದುವರೆಗೆ 15 ಬಾರಿ ಮುಖಾಮುಖಿ ಆಗಿದ್ದು, ಭಾರತ 9 ಮತ್ತು ದಕ್ಷಿಣ ಆಫ್ರಿಕಾ 6 ಪಂದ್ಯಗಳಲ್ಲಿ ಗೆಲುವು ದಾಖಲಿಸಿವೆ.
ಉಭಯ ತಂಡಗಳ ನಡುವಣ ಪಂದ್ಯದಲ್ಲಿ ರೋಹಿತ್‌ ಶರ್ಮ ಅತೀ ಹೆಚ್ಚು ರನ್‌ ಗಳಿಸಿದ್ದು, 13 ಪಂದ್ಯಗಳಲ್ಲಿ 362 ರನ್‌ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. 12 ಪಂದ್ಯಗಳಿಂದ 339 ರನ್‌ ಬಾರಿಸಿರುವ ಸುರೇಶ್‌ ರೈನಾ 2ನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ಪರ ಜೀನ್‌ ಪಾಲ್‌ ಡುಮಿನಿ 10 ಪಂದ್ಯಗಳಿಂದ 259 ರನ್‌ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ.
ದಕ್ಷಿಣ ಆಫ್ರಿಕಾ ತಂಡ ಭಾರತದಲ್ಲಿ 2 ಸರಣಿಗಳನ್ನು ಆಡಿದೆ. 2015ರಲ್ಲಿ ಆಡಿದ ಸರಣಿಯನ್ನು ಪ್ರವಾಸಿಗರು 2-0ಯಿಂದ ಗೆದ್ದು ಬೀಗಿದರೆ, 2ನೇ ಸರಣಿ 1-1ರಿಂದ ಸಮಬಲದಲ್ಲಿ ಅಂತ್ಯಗೊಂಡಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಭಾರತ-ದ.ಆಫ್ರಿಕಾ ಟಿ-20: ವಿಶ್ವದಾಖಲೆ ಮೇಲೆ ಭಾರತ ಕಣ್ಣು