Select Your Language

Notifications

webdunia
webdunia
webdunia
webdunia

ರೋಹಿತ್-ಪೂಜಾರ ಆಸರೆ: ಭಾರತ ತಿರುಗೇಟು

ರೋಹಿತ್-ಪೂಜಾರ ಆಸರೆ: ಭಾರತ ತಿರುಗೇಟು
bangalore , ಶುಕ್ರವಾರ, 27 ಆಗಸ್ಟ್ 2021 (20:26 IST)
ಆರಂಭಿಕ ರೋಹಿತ್ ಶರ್ಮ ಹಾಗೂ ಚೇತೇಶ್ವರ್ ಪೂಜಾರ ಅವರ ಅಮೋಘ ಜೊತೆಯಾಟದ ನೆರವಿನಿಂದ ಭಾರತ ತಂಡ ಮೂರನೇ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ಗೆ ತಿರುಗೇಟು ನೀಡಿದೆ.
ಲೀಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಗುರುವಾರ ಚಹಾ ವಿರಾಮದ ವೇಳೆಗೆ ಭಾರತ 1 ವಿಕೆಟ್ ಕಳೆದುಕೊಂಡು 112 ರನ್ ಗಳಿಸಿದೆ. ಈ ಮೂಲಕ ಭಾರತ ಮುನ್ನಡೆ ಪಡೆಯಬೇಕಾದರೆ ಇನ್ನೂ 242 ರನ್ ಗಳಿಸಬೇಕಾಗಿದೆ.
ಕೆಎಲ್ ರಾಹುಲ್ (8) ವಿಫಲರಾದ ನಂತರ ರೋಹಿತ್ ಶರ್ಮ ಮತ್ತು ಪೂಜಾರ ಮುರಿಯದ 2ನೇ ವಿಕೆಟ್ ಗೆ 78 ರನ್ ಪೇರಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು.
ರೋಹಿತ್ ಶರ್ಮ 152 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 59 ರನ್ ಗಳಿಸಿದ್ದರೆ, ಪೂಜಾರ 72 ಎಸೆತಗಳಲ್ಲಿ 7 ಬೌಂಡರಿ ಸೇರಿದ 40 ರನ್ ಬಾರಿಸಿ ತಂಡವನ್ನು ಮುನ್ನಡೆಸಿದ್ದಾರೆ.
sports news

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲೆಂಡ್ ಗೆ 354 ರನ್ ಮುನ್ನಡೆ: ರಾಹುಲ್, ರೋಹಿತ್ ಎಚ್ಚರಿಕೆ ಆರಂಭ