Select Your Language

Notifications

webdunia
webdunia
webdunia
webdunia

ರೋಹಿತ್, ರಾಹುಲ್ ಅರ್ಧಶತಕ: ಉತ್ತಮ ಮೊತ್ತದತ್ತ ಭಾರತ

ರೋಹಿತ್, ರಾಹುಲ್ ಅರ್ಧಶತಕ: ಉತ್ತಮ ಮೊತ್ತದತ್ತ ಭಾರತ
bengaluru , ಗುರುವಾರ, 12 ಆಗಸ್ಟ್ 2021 (21:58 IST)

ಲಾರ್ಡ್ಸ್ ಮೈದಾನದಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಚಹಾ ವಿರಾಮದ ನಂತರ ಮೊದಲ ಇನಿಂಗ್ಸ್ ನಲ್ಲಿ 2 ವಿಕೆಟ್ ಕಳೆದುಕೊಂಡು 202 ರನ್ ಗಳಿಸಿದೆ.

ಮಳೆಯ ಅಡ್ಡಿಯ ನಡುವೆ ತಾಳ್ಮೆಯಿಂದ ಇನಿಂಗ್ಸ್ ಆರಂಭಿಸಿದ ಆರಂಭಿಕರಾದ ರೋಹಿತ್ ಮತ್ತು ರಾಹುಲ್ ಮೊದಲ ವಿಕೆಟ್ ಗೆ 126 ರನ್ ಕಲೆ ಹಾಕಿದರು. ರೋಹಿತ್ ಶರ್ಮ 145 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದಂತೆ 83 ರನ್ ಗಳಿಸಿದ್ದಾಗ ಆಂಡರ್ಸನ್ ಎಸೆತದಲ್ಲಿ ಔಟಾದರೆ, ರಾಹುಲ್ 178 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 82 ರನ್ ಬಾರಿಸಿ ಔಟಾಗದೇ ಉಳಿದಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ (9) ವಿಫಲರಾದರೆ, ನಾಯಕ ವಿರಾಟ್ ಕೊಹ್ಲಿ (14) ವಿಕೆಟ್ ಉಳಿಸಿಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಲಾರ್ಡ್ಸ್ ಟೆಸ್ಟ್ ಗೆ ಮಳೆ ಅಡ್ಡಿ: ಭಾರತ ಉತ್ತಮ ಆರಂಭ