Select Your Language

Notifications

webdunia
webdunia
webdunia
webdunia

ಲಾರ್ಡ್ಸ್ ಟೆಸ್ಟ್ ಗೆ ಮಳೆ ಅಡ್ಡಿ: ಭಾರತ ಉತ್ತಮ ಆರಂಭ

ಲಾರ್ಡ್ಸ್ ಟೆಸ್ಟ್ ಗೆ ಮಳೆ ಅಡ್ಡಿ: ಭಾರತ ಉತ್ತಮ ಆರಂಭ
bengaluru , ಗುರುವಾರ, 12 ಆಗಸ್ಟ್ 2021 (17:56 IST)
ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಗಾಯಗೊಂಡಿರುವ ಶಾರ್ದೂಲ್ ಠಾಕೂರ್ ಬದಲು ಮಧ್ಯಮ ವೇಗಿ ಇಶಾಂತ್ ಶರ್ಮ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಇಂಗ್ಲೆಂಡ್ ತಂಡದಲ್ಲಿ ಮಾರ್ಕ್ ವುಡ್, ಓಲಿ ರಾಬಿನ್ಸನ್, ಸ್ಯಾಮ್ ಕುರಿಯನ್ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಮೂರು ಬದಲಾವಣೆ ಮಾಡಲಾಗಿದೆ.
ಭಾರತದ ಪರ ಬ್ಯಾಟಿಂಗ್ ಗೆ ಇಳಿದ ರೋಹಿತ್ ಶರ್ಮ ಮತ್ತು ಕೆ.ಎಲ್. ರಾಹುಲ್ ಎಚ್ಚರಿಕೆಯಿಂದ ಇನಿಂಗ್ಸ್ ಆರಂಭಿಸಿದ್ದು, ಮಳೆಯಿಂದ ಆಟ ನಿಂತಾಗ ಭಾರತ 18.4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 46 ರನ್ ಗಳಿಸಿತ್ತು. ರೋಹಿತ್ ಶರ್ಮ 35 ಮತ್ತು ಕೆಎಲ್ ರಾಹುಲ್ 10 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯಕ್ಕೆ ಮತ್ತೆ ಮಳೆ ಕಾಟ