ಮೈದಾನದಲ್ಲಿ ಶೊಯೇಬ್ ಮಲಿಕ್ ಪತ್ನಿ ಸನಾ ಜಾವೇದ್ ನೋಡಿ ಸಾನಿಯಾ ಎಂದು ಕೂಗಿದ ಪ್ರೇಕ್ಷಕರು

Krishnaveni K
ಬುಧವಾರ, 21 ಫೆಬ್ರವರಿ 2024 (10:18 IST)
Photo Courtesy: Instagram
ಕರಾಚಿ: ಪಿಎಸ್ ಎಲ್ ಮ್ಯಾಚ್ ನೋಡಲು ಬಂದಿದ್ದ ಶೊಯೇಬ್ ಮಲಿಕ್ ನೂತನ ಪತ್ನಿ ಸನಾ ಜಾವೇದ್ ರನ್ನು ಅಭಿಮಾನಿಗಳ ಗುಂಪೊಂದು ಸಾನಿಯಾ ಮಿರ್ಜಾ ಹೆಸರೆತ್ತಿ ಕಿಚಾಯಿಸಿದೆ.

ಶೊಯೇಬ್ ಮಲಿಕ್ ಇತ್ತೀಚೆಗಷ್ಟೇ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಜೊತೆಗಿನ ದಾಂಪತ್ಯ ಜೀವನ ಅಂತ್ಯಗೊಳಿಸಿದ್ದರು. ಅದರ ಬೆನ್ನಲ್ಲೇ ಪಾಕ್ ಟಿವಿ ತಾರೆ ಸನಾ ಜಾವೇದ್ ರನ್ನು ಮದುವೆಯಾಗಿದ್ದರು. ಮದುವೆ ಫೋಟೋಗಳನ್ನು ಶೊಯೇಬ್ ಹಂಚಿಕೊಂಡಾಗಲೇ ಸಾನಿಯಾ ಜೊತೆಗಿನ ವಿಚ್ಛೇದನ ಅಧಿಕೃತವಾಗಿ ಎಲ್ಲರಿಗೂ ಗೊತ್ತಾಗಿತ್ತು.

ಇದರ ಬೆನ್ನಲ್ಲೇ ಹಲವರು ಶೊಯೇಬ್ ರನ್ನು ಟ್ರೋಲ್ ಮಾಡಿದ್ದರು. ಸನಾ ಜಾವೇದ್ ಜೊತೆಗೆ ಶೊಯೇಬ್ ಗೆ ಮೂರನೇ ಮದುವೆಯಾಗಿತ್ತು. ಇದಕ್ಕೆ ಮೊದಲು ಆಯೆಷಾ ಸಿದ್ದಿಕಿ ಎಂಬವರನ್ನು ಮದುವೆಯಾಗಿ ವಿಚ್ಛೇದನ ನೀಡಿದ್ದರು. ಅದಾದ ಬಳಿಕ ಸಾನಿಯಾರನ್ನು ಮದುವೆಯಾಗಿದ್ದರು. ಸಾನಿಯಾ ಮತ್ತು ಶೊಯೇಬ್ ಗೆ ಓರ್ವ ಪುತ್ರನೂ ಇದ್ದಾನೆ.

ಆದರೆ ಸಾನಿಯಾಗೂ ವಿಚ್ಛೇದನ ನೀಡಿದ ಮೇಲೆ ಶೊಯೇಬ್ ಇನ್ನೊಂದು ಮದುವೆಯಾದಾಗ ತೀವ್ರ ಟ್ರೋಲ್ ಗೊಳಾಗಿದ್ದರು. ಇದು ಎಷ್ಟರಮಟ್ಟಿಗೆ ಎಂದರೆ ಶೊಯೇಬ್ ನೂತನ ಪತ್ನಿ ಸನಾ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೊಳಗಾಗುತ್ತಲೇ ಇದ್ದರು.

ಇದೀಗ ಪಾಕಿಸ್ತಾನ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಪತಿ ಶೊಯೇಬ್ ಆಡುವ ಪಂದ್ಯ ನೋಡಲು ಮೈದಾನಕ್ಕೆ ಬಂದಿದ್ದ ಸನಾಗೆ ಪ್ರೇಕ್ಷಕರ ಗುಂಪೊಂದು ಸಾನಿಯಾ, ಸಾನಿಯಾ ಎಂದು ಕರೆದು ಕಿಚಾಯಿಸಿದೆ. ಸನಾ ಬೌಂಡರಿ ಲೈನ್ ಬಳಿ ಹೋಗುತ್ತಿದ್ದಾಗ ಬೇಕೆಂದೇ ಪ್ರೇಕ್ಷಕರ ಗುಂಪು ಸಾನಿಯಾ ಹೆಸರೆತ್ತಿ ಕೂಗಿದೆ. ಇದನ್ನು ಗಮನಿಸಿದ ಸನಾ ಪ್ರೇಕ್ಷಕರ ಕಡೆಗೆ ದಿಟ್ಟಿಸಿ ನೋಡಿ ಅಲ್ಲಿಂದ ತೆರಳಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ  ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಜನವರಿಯಲ್ಲೇ ನಡೆಯಲಿದೆ ಡಬ್ಲ್ಯುಪಿಎಲ್‌ ಟೂರ್ನಿ: ಆರ್‌ಸಿಬಿ ಅಭಿಮಾನಿಗಳಿಗೆ ಬಿಗ್‌ ಶಾಕ್‌

ಕಾಂತಾರ ಸಕ್ಸಸ್ ಬೆನ್ನಲ್ಲೇ ಕ್ರಿಕೆಟ್‌ನತ್ತ ಮುಖಮಾಡಿದ ಹೊಂಬಾಳೆ, ಏನಿದು ಬೆಳವಣಿಗೆ

ಇಂಥಾ ಪಿಚ್ ನಲ್ಲಿ ಸಚಿನ್, ಕೊಹ್ಲಿಗೂ ಆಡಕ್ಕೆ ಆಗ್ತಿರಲಿಲ್ಲ: ಹರ್ಭಜನ್ ಸಿಂಗ್ ವಾಗ್ದಾಳಿ

ಐಪಿಎಲ್ ನಲ್ಲಿ ಮಾಲಿಕರು ಏನೇನೋ ಪ್ರಶ್ನೆ ಕೇಳ್ತಾರೆ: ಕೆಎಲ್ ರಾಹುಲ್ ಬಿಚ್ಚಿಟ್ಟ ಸತ್ಯ

ಟೀಂ ಇಂಡಿಯಾ ಟೆಸ್ಟ್ ತಂಡ ಹಳ್ಳ ಹಿಡಿಸಿದ ಗೌತಮ್ ಗಂಭೀರ್ ಟೆಸ್ಟ್ ದಾಖಲೆ ಹೇಗಿತ್ತು ನೋಡಿ

ಮುಂದಿನ ಸುದ್ದಿ
Show comments