Akaay Kohli: ವಿರಾಟ್ ಕೊಹ್ಲಿ ಪುತ್ರನಿಗೆ ಹುಟ್ಟಿದ ಗಳಿಗೆಯಲ್ಲೇ 55 ಕ್ಕೂ ಹೆಚ್ಚು ಇನ್ ಸ್ಟಾ ಖಾತೆ!

Krishnaveni K
ಬುಧವಾರ, 21 ಫೆಬ್ರವರಿ 2024 (09:35 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ದಂಪತಿ ನಿನ್ನೆಯಷ್ಟೇ ಗಂಡು ಮಗು ಜನಿಸಿರುವ ಖುಷಿ ಸುದ್ದಿ ಹಂಚಿಕೊಂಡಿದ್ದರು.

ವಿರುಷ್ಕಾ ದಂಪತಿ ತಮ್ಮ ಮಗನಿಗೆ ‘ಅಕಾಯ್’ ಎಂದು ನಾಮಕರಣ ಮಾಡಿದ್ದಾರೆ. ಮಗನ ಆಗಮನದ ಸುದ್ದಿ ಜೊತೆಗೆ ಹೆಸರನ್ನೂ ವಿರಾಟ್-ಅನುಷ್ಕಾ ರಿವೀಲ್ ಮಾಡಿದ್ದರು. ಈ ಖುಷಿ ಸುದ್ದಿ ಕೇಳಿ ಅಭಿಮಾನಿಗಳು ತಮ್ಮ ಮನೆಯಲ್ಲಿಯೇ ಮಗು ಜನಿಸಿದಷ್ಟು ಸಂಭ್ರಮಿಸಿದ್ದಾರೆ. ಜ್ಯೂ. ಕೊಹ್ಲಿ ಆಗಮನವಾಗಿದೆ ಎಂದು ಖುಷಿ ಪಟ್ಟಿದ್ದಾರೆ.

ಅಕಾಯ್ ಕೊಹ್ಲಿ ಕೂಡಾ ತಂದೆಯಂತೇ ಹುಟ್ಟಿದ ಗಳಿಗೆಯಲ್ಲಿ ದಾಖಲೆಯನ್ನೇ ಮಾಡಿದ್ದಾನೆ. ಕೊಹ್ಲಿ ದಂಪತಿ ಮಗ ಹುಟ್ಟಿದ ವಿಚಾರ ಪ್ರಕಟಿಸುತ್ತಿದ್ದಂತೇ ಇನ್ ಸ್ಟಾಗ್ರಾಂನಲ್ಲಿ ಅಕಾಯ್ ಹೆಸರಿನಲ್ಲಿ 55 ಕ್ಕೂ ಇನ್ ಸ್ಟಾಗ್ರಾಂ ಖಾತೆಗಳು ಸೃಷ್ಟಿಯಾಗಿದೆ. ಕೊಹ್ಲಿ ಅಭಿಮಾನಿಗಳು ಅಕಾಯ್ ಕೊಹ್ಲಿ ಹೆಸರಿನಲ್ಲಿ ಅಭಿಮಾನಿ ಖಾತೆಗಳನ್ನು ತೆರೆದಿದ್ದಾರೆ. ಕೆಲವರು ಇದಕ್ಕೆ ಪ್ರೊಫೈಲ್ ಫೋಟೋವಾಗಿ ತಮ್ಮದೇ ಕಲ್ಪನೆಯಲ್ಲಿ ಮಗುವಿನ ಫೋಟೋವನ್ನೂ ಹಾಕಿಕೊಂಡಿದ್ದಾರೆ.

ತಂದೆ ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಲ್ಲಿ ದಾಖಲೆ ಮಾಡುವುದಕ್ಕೆ ಹೆಸರು ವಾಸಿ. ಅಷ್ಟೇ ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲೂ ಅತೀ ಹೆಚ್ಚು ಫಾಲೋವರ್ ಗಳನ್ನು ಹೊಂದಿದ ದಾಖಲೆ ಕೊಹ್ಲಿಯದ್ದು. ಈಗ ಪುಟಾಣಿ ಅಕಾಯ್ ಕೂಡಾ ಹುಟ್ಟಿದ ಗಳಿಗೆಯಲ್ಲೇ ಸೋಷಿಯಲ್ ಮೀಡಿಯಾದಲ್ಲಿ ದಾಖಲೆ ಮಾಡಿದ್ದಾನೆ.

ಲಂಡನ್ ನಲ್ಲಿ ಅನುಷ್ಕಾಗೆ ಹೆರಿಗೆಯಾಗಿದೆ. ಫೆಬ್ರವರಿ 15 ರಂದು ಮಗುವಿನ ಜನನವಾಗಿದೆ ಎಂದು ಕೊಹ್ಲಿ ದಂಪತಿ ನಿನ್ನೆ ಸಂಜೆ ಸಂದೇಶ ಪ್ರಕಟಿಸಿದ್ದಾರೆ. ಅನುಷ್ಕಾ ಗರ್ಭಿಣಿ ಎನ್ನುವ ವಿಚಾರವನ್ನೂ ಕೊಹ್ಲಿ ದಂಪತಿ ಮಾಧ್ಯಮಗಳಿಂದ ಗೌಪ್ಯವಾಗಿಯೇ ಇಟ್ಟಿದ್ದರು. ಕಳೆದ ಕೆಲವು ಸಮಯದಿಂದ ಅನುಷ್ಕಾ ಲಂಡನ್ ನಲ್ಲಿಯೇ ಇದ್ದರು. ಹೀಗಾಗಿ ಅವರು ಗರ್ಭಿಣಿ ಇರಬಹುದು ಎಂದು ಊಹಾಪೋಹಗಳಿತ್ತು. ಅದೀಗ ನಿಜವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಕ್ಯಾಪ್ಟನ್ ಬದಲಾದರೂ ಟೀಂ ಇಂಡಿಯಾದ ಟಾಸ್ ಅದೃಷ್ಟ ಮಾತ್ರ ಬದಲಾಗಿಲ್ಲ

IND vs SA: ಕ್ಯಾಪ್ಟನ್ ಆಗಿ ಹೊಸ ದಾಖಲೆ ಮಾಡಲಿದ್ದಾರೆ ರಿಷಭ್ ಪಂತ್

ಹಳದಿ ಸಂಭ್ರಮದಲ್ಲಿರುವ ಸ್ಮೃತಿ ಮಂಧಾನಳನ್ನು ಕುಣಿಸಿದ ಟೀಂ ಇಂಡಿಯಾ ಆಟಗಾರ್ತಿಯರು, video

ವಿಶ್ವಕಪ್ ಗೆದ್ದ ಮೈದಾನದಲ್ಲೇ ಸ್ಮೃತಿ ಮಂಧಾನಗೆ ಕನಸಿನಂತೆ ಪ್ರಪೋಸ್ ಮಾಡಿದ ಭಾವೀ ಪತಿ video

ಸಖತ್ ಫನ್ನಿಯಾಗಿ ಎಂಗೇಜ್ ಮೆಂಟ್ ವಿಷ್ಯ ಹೊರಹಾಕಿದ ಸ್ಮೃತಿ ಮಂಧಾನ Video

ಮುಂದಿನ ಸುದ್ದಿ
Show comments