Select Your Language

Notifications

webdunia
webdunia
webdunia
webdunia

ಗಂಡು ಮಗುವಿಗೆ ಜನ್ಮವಿತ್ತ ಅನುಷ್ಕಾ: ಖುಷಿ ಸುದ್ದಿ ಹಂಚಿಕೊಂಡ ವಿರಾಟ್ ಕೊಹ್ಲಿ

Virat Kohli-Anushka Sharma

Krishnaveni K

ಮುಂಬೈ , ಮಂಗಳವಾರ, 20 ಫೆಬ್ರವರಿ 2024 (21:51 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗೆ ಗಂಡು ಮಗುವಿನ ಜನನವಾಗಿದೆ. ಈ ಖುಷಿ ಸುದ್ದಿಯನ್ನು ದಂಪತಿ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಅನುಷ್ಕಾ ಶರ್ಮಾ ಗರ್ಭಿಣಿ ಎನ್ನುವ ವಿಚಾರವನ್ನು ಕೊಹ್ಲಿ ದಂಪತಿ ಇದುವರೆಗೆ ಗೌಪ್ಯವಾಗಿಯೇ ಇಟ್ಟಿದ್ದರು. ಆದರೆ ಇಬ್ಬರೂ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರ ಆಗಾಗ ಸುದ್ದಿಯಾಗುತ್ತಿತ್ತು. ಆದರೆ ಇಬ್ಬರೂ ಇದನ್ನು ಅಧಿಕೃತಗೊಳಿಸಿರಲಿಲ್ಲ. ಇದೇ ಕಾರಣಕ್ಕೆ ಕೊಹ್ಲಿ ಪದೇ ಪದೇ ಟೀಂ ಇಂಡಿಯಾದಿಂದ ಹೊರಗುಳಿಯುತ್ತಿದ್ದರು.

ಇದೀಗ ಕೊಹ್ಲಿ ದಂಪತಿ ಸೋಷಿಯಲ್ ಮೀಡಿಯಾ ಮೂಲಕ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ‘ದೇವರ ಆಶೀರ್ವಾದದಿಂದ ಫೆಬ್ರವರಿ 15 ರಂದು ನಾವು ಪುತ್ರ ‘ಅಕಾಯ್’ ನನ್ನು ಬರಮಾಡಿಕೊಂಡಿದ್ದೇವೆ. ನಮ್ಮ ಪ್ರೈವೆಸಿಯನ್ನು ಗೌರವಿಸಿ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ’ ಎಂದು ಇಬ್ಬರೂ ಸಂದೇಶ ಬರೆದುಕೊಂಡಿದ್ದಾರೆ.

ಇನ್ನು, ಜ್ಯೂನಿಯರ್ ಕೊಹ್ಲಿ ಆಗಮನದ ಸುದ್ದಿ ಕೇಳಿ ಅಭಿಮಾನಿಗಳಂತೂ ಸಂಭ್ರಮಿಸಿದ್ದಾರೆ. ಲಂಡನ್ ನಲ್ಲಿ ಅನುಷ್ಕಾಗೆ ಹೆರಿಗೆಯಾಗಿದೆ ಎನ್ನಲಾಗಿದೆ. ಈ ಎಲ್ಲಾ ವಿಚಾರಗಳನ್ನೂ ಕೊಹ್ಲಿ ದಂಪತಿ ಗೌಪ್ಯವಾಗಿಯೇ ಇಟ್ಟಿದ್ದಾರೆ. ಆದರೆ ಸದ್ಯಕ್ಕೆ ವಮಿಕಾ ಮುದ್ದು ತಮ್ಮನನ್ನು ಸ್ವಾಗತಿಸಿದ್ದಾಳೆ.


Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024 ರ ವೇಳಾಪಟ್ಟಿ ಪ್ರಕಟ