Publish Date: Fri, 01 May 2020 (09:34 IST)
Updated Date: Fri, 01 May 2020 (09:36 IST)
ಬೆಂಗಳೂರು: ಮೊಟ್ಟೆಯ ಹೊರಾವರಣ ತೆಗೆಯುವುದು ನಿಮಗೆ ಸವಾಲಿನ ಕೆಲಸ ಎನಿಸುತ್ತಿದೆಯೇ? ಹಾಗಿದ್ದರೆ ಸುಲಭವಾಗಿ ಸಿಪ್ಪೆ ತೆಗೆಯಲು ಇಲ್ಲಿದೆ ಟಿಪ್ಸ್.
ಮೊಟ್ಟೆಯನ್ನು 10 ನಿಮಿಷ ಕಾಲ ನೀರಿನಲ್ಲಿ ಚೆನ್ನಾಗಿ ಕುದಿಸಿ. ಬಳಿಕ ಅದನ್ನು ತಂಪು ನೀರಿನಲ್ಲಿ ಹಾಕಿ ಚೆನ್ನಾಗಿ ನೆನೆಸಿಡಿ. ಬೇಕಿದ್ದರೆ ಎರಡು ಐಸ್ ಕ್ಯೂಬ್ ಹಾಕಿದರೆ ಉತ್ತಮ.
ಮೊಟ್ಟೆಯನ್ನು ನೀರಿನಲ್ಲಿ ಕುದಿಸುವಾಗ ಅದಕ್ಕೆ ಎರಡು ನಿಂಬೆ ಹೋಳುಗಳನ್ನು ಹಾಕಿದರೆ ಬೇಗನೇ ಸಿಪ್ಪೆ ತೆಗೆಯಬಹುದು. ಆದಷ್ಟು ನೀರಿನೊಳಗಿಟ್ಟುಕೊಂಡೇ ಸ್ಪೂನ್ ಬಳಸಿ ಸಿಪ್ಪೆ ತೆಗೆಯಿರಿ.