ಹಲಸಿನ ಹಣ್ಣಿನ ಚಾಕೋಲೇಟ್

Webdunia
ಮಂಗಳವಾರ, 26 ಮಾರ್ಚ್ 2019 (17:16 IST)
ಹಸಿದಾಗ ಹಲಸು, ಉಂಡಾಗ ಮಾವು ಎಂದು ನಮ್ಮ ಹಳಬರು ಹೇಳಿದ್ದಾರೆ. ಹಲಸಿನ ಹಣ್ಣನ್ನು ಯಾರು ಇಷ್ಟಪಡುವುದಿಲ್ಲ ಹೇಳಿ. ಅದರ ಕಾಯಿಯಿಂದ ಹಿಡಿದು ಹಣ್ಣಿನ ಒಳಗಿರುವ ಬೀಜವೂ ಸಹ ಉಪಯೋಗಕ್ಕೆ ಬರುತ್ತದೆ. ಹಲಸಿನ ಹಣ್ಣಿನಿಂದ ಏನನ್ನೇ ಮಾಡಿದರೂ ರುಚಿಯಾಗಿರುತ್ತದೆ. ಮತ್ತು ಅದರ ಕಾಯಿಯಿಂದಲೂ ಬಗೆಬಗೆಯಾದ ಖಾದ್ಯಗಳನ್ನು ಮಾಡಿ ಸವಿಯುತ್ತಾರೆ. ಹಾಗಾದರೆ ಅದೇ ಹಲಸಿನ ಹಣ್ಣಿನಿಂದ ಚಾಕೋಲೇಟನ್ನು ಮಾಡುವುದು ಹೇಗೆ ಎಂಬುದನ್ನು ನೋಡೋಣ.
   ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಹಲಸಿನ ಹಣ್ಣಿನ ಸೊಳೆ 1 ಕಪ್
* ಸಕ್ಕರೆ 1 ಕಪ್
* ತೆಂಗಿನತುರಿ 1/4 ಕಪ್
* ಗೋಧಿ ಪುಡಿ 1/2 ಕಪ್
* ಶುಂಠಿ ಪುಡಿ 1/2 ಚಮಚ
* ಕಾಳುಮೆಣಸಿನ ಪುಡಿ 1/4 ಚಮಚ
* ತುಪ್ಪ 1 ಚಮಚ
* ಗೋಡಂಬಿ ಸ್ವಲ್ಪ
    
    ತಯಾರಿಸುವ ವಿಧಾನ:
   ಮೊದಲು ಹಲಸಿನ ಹಣ್ಣಿಗೆ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ರುಬ್ಬಿಕೊಂಡ ಹಲಸಿನ ಹಣ್ಣಿನ ಮಿಶ್ರಣವನ್ನು ಹಾಕಬೇಕು. ನಂತರ ಆ ಹಣ್ಣಿನ ಮಿಶ್ರಣವು ಬೇಯುವವರೆಗೆ ತೊಳೆಸಬೇಕು. ನಮತರ ಈ ಮಿಶ್ರಣಕ್ಕೆ ತೆಂಗಿನತುರಿ, ಸಕ್ಕರೆಯನ್ನು ಹಾಕಿ ತೊಳೆಸಬೇಕು. ನಂತರ ಸಕ್ಕರೆಯು ಕರಗಿ ನೀರಾದ ಮೇಲೆ ಗೋಧಿ ಪುಡಿಯನ್ನು ಹಾಕಿ ಸರಿಯಾಗಿ ತೊಳೆಸಿ ಮಿಶ್ರಣ ಗಟ್ಟಿಯಾಗುವವರೆಗೂ ತೊಳೆಯಬೇಕು.

ನಂತರ ಶುಂಠಿ ಪುಡಿ, ಕಾಳುಮೆಣಸಿನ ಪುಡಿಯನ್ನು ಹಾಕಿ ತೊಳೆಸಬೇಕು. ಅದನ್ನು ಬಾಣಲೆಯ ತಳ ಬಿಡುವ ತನಕ ಕಾಯಿಸಬೇಕು. ನಂತರ ಒಲೆಯಿಂದ ಕೆಳಗಿಳಿಸಬೇಕು. ನಂತರ ಕೈಗೆ ತುಪ್ಪವನ್ನು ಹಚ್ಚಿಕೊಂಡು ಸಣ್ಣ ಸಣ್ಣ ಚಾಕೋಲೇಟ್ ಹದಕ್ಕೆ ಅಥವಾ ಸ್ವಲ್ಪ ಚಪ್ಪಟೆ ಮಾಡಿ ತಟ್ಟೆಯಲ್ಲಿ ಹಾಕಿಕೊಳ್ಳಬೇಕು.ಅದರ ಅಲಂಕಾರಕ್ಕೆ ಗೋಡಂಬಿಯನ್ನು ಹಾಕಿದರೆ ಇನ್ನೂ ಚೆನ್ನಾಗಿರುತ್ತದೆ. ಅದು ಆರಿದ ನಂತರ ಗಾಳಿಯಾಡದ ಡಬ್ಬದಲ್ಲಿ ಹಾಕಿ ಮುಚ್ಚಿಡಬೇಕು. ಈ ಚಾಕೋಲೇಟ್ ಸಣ್ಣ ಮಕ್ಕಳಿಗೆ ಬಹಳ ಇಷ್ಟವಾಗುತ್ತದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬಜ್ಜಿ ತಿಂದ ತಕ್ಷಣ ನೀರು ಕುಡಿದ್ರೆ ಏನಾಗುತ್ತದೆ

ನಾವು ನಿದ್ರೆಗೆ ಜಾರುವ ಮುನ್ನಾ ಮಾಡಲೇ ಬಾರದ ತಪ್ಪುಗಳು

ಮೊಳಕೆ ಹುರುಳಿ ಕಾಳಿನಿಂದ ಆರೋಗ್ಯಕ್ಕಿರಲಿದೆ ಸಾಕಷ್ಟು ಪ್ರಯೋಜನ

Sankranti 2026: ಎಳ್ಳು ಬೆಲ್ಲ ಹಂಚಿಕೆ ಹಿಂದೆ ನೀವು‌ ತಿಳಿಯದಿರುವ ಅಚ್ಚರಿ ಅಂಶಗಳು

ಕುತ್ತಿಗೆ ಭಾಗದಲ್ಲಿ ಕಪ್ಪಾಗುವುದು ಸಾಮಾನ್ಯ ಈ ಕಾರಣಕ್ಕೆ

ಮುಂದಿನ ಸುದ್ದಿ
Show comments