Select Your Language

Notifications

webdunia
webdunia
webdunia
webdunia

ಸ್ವಾದಿಷ್ಠ ರಾಗಿ ಹುರಿಟ್ಟು

ಸ್ವಾದಿಷ್ಠ ರಾಗಿ ಹುರಿಟ್ಟು
ಬೆಂಗಳೂರು , ಮಂಗಳವಾರ, 26 ಮಾರ್ಚ್ 2019 (17:08 IST)
ರಾಗಿ ಒಂದು ಪೌಷ್ಟಿಕ ಆಹಾರ. ರಾಗಿಯಿಂದ ದೋಸೆ, ರೊಟ್ಟಿ ಮಾಡಿಕೊಂಡು ತಿನ್ನಬಹುದು. ಹಾಗೆಯೇ ರಾಗಿ ಹುರಿಟ್ಟು ಮಾಡಬಹುದು. ಬೇಸಿಗೆಯಲ್ಲಂತೂ ರಾಗಿಗಿಂತ ಉತ್ತಮ ಖಾದ್ಯ ಮತ್ತೊಂದಿಲ್ಲ. 
ಬೇಕಾಗುವ ಪದಾರ್ಥ: ರಾಗಿ ಹುರಿಟ್ಟು ಮಾಡಲು ಬೇಕಾಗುವ ಪದಾರ್ಥಗಳು ಒಂದು ಕೆಜಿ ರಾಗಿ, ನೀರು, ಬೆಲ್ಲ, ತೆಂಗಿನ ತುರಿ ಮತ್ತು ಏಲಕ್ಕಿ ಪುಡಿ.
 
ಮಾಡುವ ವಿಧಾನ : ರಾಗಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಒಂದು ಬಿಳಿಯ ಬಟ್ಟೆಯಲ್ಲಿ ನೀರನ್ನು ಬಸಿದು ನೆರಳಿನಲ್ಲಿ ಒಣಗಿಸಬೇಕು. ರಾಗಿ ಒಣಗಿದ ಬಳಿಕ ಹುರಿಯಬೇಕು, ಒಂದೊಂದು ಹಿಡಿಯಷ್ಟು ರಾಗಿಯನ್ನು ಬಾಣಲೆಗೆ ಹಾಕಿ ಹುರಿಯಬೇಕು. ಹುರಿದಾಗ ರಾಗಿ ಅರಳುತ್ತದೆ. ಈ ರಾಗಿ ಅರಳನ್ನು ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಬೇಕು. ಈಗ ರಾಗಿ ಹುರಿಟ್ಟು ಸಿದ್ಧ.
 
ಈ ಹುರಿಟ್ಟಿಗೆ ಬೆಲ್ಲ, ಏಲಕ್ಕಿ ಪುಡಿ, ತೆಂಗಿನಕಾಯಿ ತುರಿ ಹಾಕಿ ನೀರಿನಲ್ಲಿ ಕಲೆಸಿ ಉಂಡೆ ಕಟ್ಟಿ ತಿಂದರೆ ರುಚಿಯೇ ರುಚಿ. ಇದನ್ನು ಬೆಲ್ಲದ ರಾಗಿ ಹುರಿಟ್ಟು ಅಂತಲೂ ಕರೆಯುತ್ತಾರೆ.
 
ರಾಗಿ ಹುರಿಟ್ಟು ಸಿದ್ಧಮಾಡಿಟ್ಟುಕೊಂಡು ಬೇಕಿನಿಸಿದಾಗ ಸಕ್ಕರೆ, ಹಾಲು ಬೆರೆಸಿ ಕಲೆಸಿಯೂ ತಿನ್ನಬಹುದು. ಹುಣಸೇಹಣ್ಣನ್ನು ನೀರಿನಲ್ಲಿ ನೆನೆಸಿ, ಕಿವುಚಿ ಹುಣಸೆ ಹಣ್ಣಿನ ರಸದ ಜತೆಗೆ ಹುರಿಟ್ಟು ಹಾಕಿ ಬೆಲ್ಲದ ನೀರಿನಲ್ಲಿ ಕಲೆಸಿ ಕುಡಿಯಲು ಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಸಮ್ಮಿಲನ ಹೀಗಿದ್ದರೆ ಚೆಂದ…