ಬೇಕಾಗುವ ಸಾಮಗ್ರಿಗಳು:
ಹುರಿದ ಶೇಂಗಾ
ಅಕ್ಕಿಹಿಟ್ಟು
ಜೀರಿಗೆ
ಇಂಗು
ಓಂಕಾಳು
ಅಚ್ಚಖಾರದ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
(ಶೇಂಗಾ ಮತ್ತು ಅಕ್ಕಿಹಿಟ್ಟಿನ ಪ್ರಮಾಣ: ಪುಡಿ ಮಾಡಿಕೊಂಡ 1 ಪಾವು ಶೇಂಗಾಗೆ 2 ಪಾವು ಅಕ್ಕಿಹಿಟ್ಟು)
ಶೇಂಗಾ ಬೀಜವನ್ನು ಹುರಿದುಕೊಂಡು, ಆರಿದ ನಂತರ ಸಿಪ್ಪೆ ಸಹಿತ ಪುಡಿಮಾಡಿಕೊಳ್ಳಿ, ಅಕ್ಕಿಹಿಟ್ಟಿಗೆ ಸ್ವಲ್ಪ ಜೀರಿಗೆ, ಇಂಗು, ಅಚ್ಚಖಾರದಪುಡಿ, ಉಪ್ಪು ಜೊತೆಗೆ ಪುಡಿಮಾಡಿಕೊಂಡ ಶೇಂಗಾ ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಶೇಂಗಾದಲ್ಲಿ ಜಿಡ್ಡಿನಂಶವಿರುವ ಕಾರಣ ಇದಕ್ಕೆ ಎಣ್ಣೆಯ ಸಾಟಿ ಬೇಕಿಲ್ಲ. ನಂತರ ಕೋಡುಬಳೆ ಆಕಾರದಲ್ಲಿ ಮಾಡಿ ಎಣ್ಣೆಯಲ್ಲಿ ಕರೆಯಿರಿ. ರುಚಿಯಾದ, ಗರಿಗರಿಯಾದ ಶೇಂಗಾ ಕೋಡುಬಳೆ ಸಿದ್ಧ.