Select Your Language

Notifications

webdunia
webdunia
webdunia
webdunia

ಕರಿಬೇವಿನ ಚಟ್ನಿ ಪುಡಿ..

ಕರಿಬೇವಿನ ಚಟ್ನಿ
ಕರಿಬೇವು ದಕ್ಷಿಣ ಭಾರತದಲ್ಲಿ ಮಾಸಾಲೆ ಪದಾರ್ಥಗಳಲ್ಲಿ ಬಳಸಲಾಗುವ ಅವಿಭಾಜ್ಯ ಘಟಕವಾಗಿದೆ. ಇದು ಹೆಚ್ಚಿನ ಪ್ರಮಾಣದ ನ್ಯೂಟ್ರಿನ್ ಮತ್ತು ಪ್ರೊಟೀನ್ ಅಂಶಗಳನ್ನು ಒಳಗೊಂಡಿದ್ದು ಕೂದಲ ಬೆಳವಣಿಗೆಗೆ ಉತ್ತಮವಾದುದಾಗಿದೆ. ಇಂತಹ ಆರೋಗ್ಯಕರವಾದ ಕರಿಬೇವನ್ನು ಕೇವಲ ಒಗ್ಗರಣೆಯಲ್ಲಿ ಬಳಸದೇ ಅದರಿಂದಲೇ ಚಟ್ನಿಪುಡಿಯನ್ನು ತಯಾರಿಸಬಹುದಾಗಿದೆ. ಈ ಚಟ್ನಿಪುಡಿ ಅನ್ನದ ಜೊತೆ ರುಚಿಯಾಗಿರುತ್ತದೆ ಮತ್ತು ದೋಸೆ, ಚಪಾತಿಗಳೊಂದಿಗೂ ತಿನ್ನಬಹುದಾಗಿದೆ.
ಬೇಕಾಗುವ ಸಾಮಗ್ರಿಗಳು:
ಕರಿಬೇವು - 1 ಕಪ್
ಕಡಲೆಬೇಳೆ - 1/4 ಕಪ್
ಉದ್ದಿನಬೇಳೆ - 2 ಚಮಚ
ದನಿಯಾ - 1 ಚಮಚ
ಹುಣಿಸೆಹಣ್ಣು - ಚಿಕ್ಕ ಚೂರು
ಕೆಂಪು ಮೆಣಸು - 5
ಒಣ ಕೊಬ್ಬರಿ ತುರಿ - 2 ಚಮಚ
ಇಂಗು - ಚಿಟಿಕೆ
ಉಪ್ಪು - ರುಚಿಗೆ
ಎಣ್ಣೆ - 2 ಚಮಚ
 
ಮಾಡುವ ವಿಧಾನ:
 
ಕರಿಬೇವಿನ ಎಲೆಯನ್ನು ಒಂದು ಪ್ಯಾನ್‌ಗೆ ಹಾಕಿ ಗರಿಗರಿಯಾಗಿ ಹುರಿದಿಟ್ಟುಕೊಳ್ಳಿ. ನಂತರ ಅದೇ ಪ್ಯಾನ್‌ನಲ್ಲಿ 2 ಚಮಚ ಎಣ್ಣೆಯನ್ನು ಹಾಕಿ ಬಿಸಿಯಾದಾಗ ಕಡಲೆಬೇಳೆ, ಉದ್ದಿನ ಬೇಳೆ ಮತ್ತು ದನಿಯಾವನ್ನು ಹಾಕಿ 2-3 ನಿಮಿಷ ಕಡಿಮೆ ಉರಿಯಲ್ಲಿ ಹುರಿಯಿರಿ. ನಂತರ ಇದಕ್ಕೆ ಹುಣಿಸೆ ಹಣ್ಣು, ಕೆಂಪು ಮೆಣಸು ಮತ್ತು ಒಣ ಕೊಬ್ಬರಿ ತುರಿಯನ್ನು ಸೇರಿಸಿ ಹೊಂಬಣ್ಣ ಬರುವವರೆಗೆ ಚೆನ್ನಾಗಿ ಹುರಿದು ಸ್ಟೌ ಆಫ್ ಮಾಡಿ. ಈ ಮಸಾಲೆಯು ಸ್ವಲ್ಪ ತಣ್ಣಗಾದ ಮೇಲೆ ಈ ಮೊದಲೇ ಹುರಿದಿಟ್ಟ ಕರಿಬೇವನ್ನು ಸೇರಿಸಿ ಅದಕ್ಕೆ ಚಿಟಿಕೆ ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿದರೆ ಕರಿಬೇವಿನ ಚಟ್ನಿ ಪುಡಿ ಸಿದ್ಧವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ರುಚಿಯಾದ ಸ್ಯಾಂಡ್‌ವಿಚ್‌ಗಳನ್ನು ಮಾಡಿ ಸವಿಯಿರಿ...