Select Your Language

Notifications

webdunia
webdunia
webdunia
Wednesday, 16 April 2025
webdunia

ಹಲಸಿನ ಹಣ್ಣಿನ ಚಾಕೋಲೇಟ್

ಜಾಕ್‌ಫ್ರುಟ್ ಚಾಕೋಲೇಟ್
ಬೆಂಗಳೂರು , ಮಂಗಳವಾರ, 26 ಮಾರ್ಚ್ 2019 (17:16 IST)
ಹಸಿದಾಗ ಹಲಸು, ಉಂಡಾಗ ಮಾವು ಎಂದು ನಮ್ಮ ಹಳಬರು ಹೇಳಿದ್ದಾರೆ. ಹಲಸಿನ ಹಣ್ಣನ್ನು ಯಾರು ಇಷ್ಟಪಡುವುದಿಲ್ಲ ಹೇಳಿ. ಅದರ ಕಾಯಿಯಿಂದ ಹಿಡಿದು ಹಣ್ಣಿನ ಒಳಗಿರುವ ಬೀಜವೂ ಸಹ ಉಪಯೋಗಕ್ಕೆ ಬರುತ್ತದೆ. ಹಲಸಿನ ಹಣ್ಣಿನಿಂದ ಏನನ್ನೇ ಮಾಡಿದರೂ ರುಚಿಯಾಗಿರುತ್ತದೆ. ಮತ್ತು ಅದರ ಕಾಯಿಯಿಂದಲೂ ಬಗೆಬಗೆಯಾದ ಖಾದ್ಯಗಳನ್ನು ಮಾಡಿ ಸವಿಯುತ್ತಾರೆ. ಹಾಗಾದರೆ ಅದೇ ಹಲಸಿನ ಹಣ್ಣಿನಿಂದ ಚಾಕೋಲೇಟನ್ನು ಮಾಡುವುದು ಹೇಗೆ ಎಂಬುದನ್ನು ನೋಡೋಣ.
   ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಹಲಸಿನ ಹಣ್ಣಿನ ಸೊಳೆ 1 ಕಪ್
* ಸಕ್ಕರೆ 1 ಕಪ್
* ತೆಂಗಿನತುರಿ 1/4 ಕಪ್
* ಗೋಧಿ ಪುಡಿ 1/2 ಕಪ್
* ಶುಂಠಿ ಪುಡಿ 1/2 ಚಮಚ
* ಕಾಳುಮೆಣಸಿನ ಪುಡಿ 1/4 ಚಮಚ
* ತುಪ್ಪ 1 ಚಮಚ
* ಗೋಡಂಬಿ ಸ್ವಲ್ಪ
    
    ತಯಾರಿಸುವ ವಿಧಾನ:
   ಮೊದಲು ಹಲಸಿನ ಹಣ್ಣಿಗೆ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ರುಬ್ಬಿಕೊಂಡ ಹಲಸಿನ ಹಣ್ಣಿನ ಮಿಶ್ರಣವನ್ನು ಹಾಕಬೇಕು. ನಂತರ ಆ ಹಣ್ಣಿನ ಮಿಶ್ರಣವು ಬೇಯುವವರೆಗೆ ತೊಳೆಸಬೇಕು. ನಮತರ ಈ ಮಿಶ್ರಣಕ್ಕೆ ತೆಂಗಿನತುರಿ, ಸಕ್ಕರೆಯನ್ನು ಹಾಕಿ ತೊಳೆಸಬೇಕು. ನಂತರ ಸಕ್ಕರೆಯು ಕರಗಿ ನೀರಾದ ಮೇಲೆ ಗೋಧಿ ಪುಡಿಯನ್ನು ಹಾಕಿ ಸರಿಯಾಗಿ ತೊಳೆಸಿ ಮಿಶ್ರಣ ಗಟ್ಟಿಯಾಗುವವರೆಗೂ ತೊಳೆಯಬೇಕು.

ನಂತರ ಶುಂಠಿ ಪುಡಿ, ಕಾಳುಮೆಣಸಿನ ಪುಡಿಯನ್ನು ಹಾಕಿ ತೊಳೆಸಬೇಕು. ಅದನ್ನು ಬಾಣಲೆಯ ತಳ ಬಿಡುವ ತನಕ ಕಾಯಿಸಬೇಕು. ನಂತರ ಒಲೆಯಿಂದ ಕೆಳಗಿಳಿಸಬೇಕು. ನಂತರ ಕೈಗೆ ತುಪ್ಪವನ್ನು ಹಚ್ಚಿಕೊಂಡು ಸಣ್ಣ ಸಣ್ಣ ಚಾಕೋಲೇಟ್ ಹದಕ್ಕೆ ಅಥವಾ ಸ್ವಲ್ಪ ಚಪ್ಪಟೆ ಮಾಡಿ ತಟ್ಟೆಯಲ್ಲಿ ಹಾಕಿಕೊಳ್ಳಬೇಕು.ಅದರ ಅಲಂಕಾರಕ್ಕೆ ಗೋಡಂಬಿಯನ್ನು ಹಾಕಿದರೆ ಇನ್ನೂ ಚೆನ್ನಾಗಿರುತ್ತದೆ. ಅದು ಆರಿದ ನಂತರ ಗಾಳಿಯಾಡದ ಡಬ್ಬದಲ್ಲಿ ಹಾಕಿ ಮುಚ್ಚಿಡಬೇಕು. ಈ ಚಾಕೋಲೇಟ್ ಸಣ್ಣ ಮಕ್ಕಳಿಗೆ ಬಹಳ ಇಷ್ಟವಾಗುತ್ತದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾದಿಷ್ಠ ರಾಗಿ ಹುರಿಟ್ಟು