ಮೊಟ್ಟೆ ಶ್ಯಾವಿಗೆ ಬಾತ್

Webdunia
ಶನಿವಾರ, 1 ಆಗಸ್ಟ್ 2020 (10:18 IST)
ಬೆಂಗಳೂರು : ಕೆಲವು ಮಕ್ಕಳು ಮೊಟ್ಟೆ ತಿನ್ನಲು ಇಷ್ಟಪಡುವುದಿಲ್ಲ. ಅಂತಹ ಮಕ್ಕಳಿಗೆ ಈ ಮೊಟ್ಟೆ ಶಾಮಿಗೆ ಬಾತ್ ಮಾಡಿಕೊಡಿ. ಇದು ಬಹು ಬೇಗನೆ, ತುಂಬಾ ಸುಲಭವಾಗಿ ಮಾಡಬಹುದಾದಂತಹ ಒಂದು ತಿಂಡಿ.

ಬೇಕಾಗುವ ಸಾಮಾಗ್ರಿಗಳು : ಮೊಟ್ಟೆ 2 (ಅದರಲ್ಲಿ ಹಳದಿ ಭಾಗವನ್ನು ಮಾತ್ರ ತೆಗೆದುಕೊಳ್ಳಿ), ಶಾವಿಗೆ  500ಗ್ರಾಂ, ಸಣ್ಣದಾಗಿ ಹೆಚ್ಚಿದ ಈರುಳ್ಳಿ 2, ದನಿಯಾ 1 ಟೀ ಸ್ಪೂನ್, ಜೀರಿಗೆ 1 ಟೀ ಸ್ಪೂನ್, ಕೆಂಪು ಮೆಣಸಿನ ಕಾಯಿ 2, ದಾಲ್ಚಿನ್ನಿ 1, ಏಲಕ್ಕಿ 2, ಎಣ್ಣೆ ಅಥವಾ ತುಪ್ಪ ಹುರಿಯಲು ಬೇಕಾಗುವಷ್ಟು, ನೀರು 1 ಕಪ್, ಸಾಸಿವೆ 1 ಚಮಚ, ಕಡಲೇಬೇಳೆ 2 ಚಮಚ, ಕರಿಬೇವು ಸ್ವಲ್ಪ, ಬೆಣ್ಣೆ 3 ಟೀ ಸ್ಪೂನ್, ರುಚಿಗೆ ಬೇಕಾಗುವಷ್ಟು ಉಪ್ಪು.

ಮಾಡುವ ವಿಧಾನ : ದನಿಯಾ, ಜೀರಿಗೆ, ಕೆಂಪು ಮೆಣಸಿನ ಕಾಯಿ , ಏಲಕ್ಕಿ, ದಾಲ್ಚಿನ್ನಿ ಇವೆಲ್ಲವನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪ ಹಾಕಿ ಶಾವಿಗೆಯನ್ನು ಹುರಿಯಿರಿ. ಆಮೇಲೆ ಸಾಸಿವೆ, ಕಡಲೇಬೇಳೆ, ಕರಿಬೇವು, ಮೊಟ್ಟೆಯ ಹಳದಿ ಭಾಗ ಹಾಗೂ ರೆಡಿಮಾಡಿಕೊಂಡ ಪುಡಿ ಇವೆಲ್ಲವನ್ನು ಒಟ್ಟಿಗೆ ಸೇರಿಸಿ  ಚೆನ್ನಾಗಿ ಕಲಸಿ. ನಂತರ ಈ ಮಿಶ್ರಣಕ್ಕೆ ನೀರು ಸೇರಿಸಿ ಕುದಿಸಿ. ನೀರು ಕುದಿದ ತಕ್ಷಣ ಶಾವಿಗೆ ಹಾಕಿ ಮಿಕ್ಸ್ ಮಾಡಿ. ನೀರು ಪೂರ್ತಿ ಆವಿಯಾಗುವವರೆಗೂ ಅದನ್ನು ಬೇಯಿಸಿದರೆ ಸಾಕು. ಈಗ ಬಿಸಿಬಿಸಿಯಾದ ಮೊಟ್ಟೆ ಶಾಮಿಗೆ ಬಾತ್ ರೆಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ

ಮುಟ್ಟು ಮುಂದೂಡುವುದು ಹೇಗೆ, ಏನು ತೊಂದರೆ ಇಲ್ಲಿದೆ ಟಿಪ್ಸ್

ಮರುವಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಗೊತ್ತಾ

ಸೌಂದರ್ಯಕ್ಕಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಚರ್ಮದ ಆರೈಕೆ ತುಂಬಾನೆ ಉತ್ತಮ

ಬೇಸಿಗೆಯ ಸಮಯದಲ್ಲಿ ಸೇವಿಸಲೇಬೇಕಾದ ಐದು ಹಣ್ಣುಗಳ ಮಾಹಿತಿ ಇಲ್ಲಿದೆ

ಮುಂದಿನ ಸುದ್ದಿ
Show comments