Select Your Language

Notifications

webdunia
webdunia
webdunia
webdunia

ರುಚಿಯಾದ ನಿಂಬೆ ರಸಂ ಮಾಡೋದು ಹೇಗೆ ಗೊತ್ತಾ

ರುಚಿಯಾದ ನಿಂಬೆ ರಸಂ ಮಾಡೋದು ಹೇಗೆ ಗೊತ್ತಾ
ಬೆಂಗಳೂರು , ಬುಧವಾರ, 12 ಸೆಪ್ಟಂಬರ್ 2018 (14:04 IST)
ಬಿಸಿ ಬಿಸಿಯಾದ ರುಚಿಯಾದ ರುಚಿಯಾದ ರಸಂ ಮಾಡಿಕೊಂಡು ತಿಂದರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ? ರಸಂಗಳು ಮಳೆಗಾಲಕ್ಕೆ ಹೇಳಿ ಮಾಡಿಸಿದ ಪದಾರ್ಥವಾಗಿದೆ. ಚಳಿಗಾಲದಲ್ಲಿ ಅನ್ನದೊಂದಿಗೆ ಮಾಡಿಕೊಂಡು ತಿಂದರೆ ಬಾಯಿ ಚಪ್ಪರಿಸುವಂತಾಗುತ್ತದೆ. ಹೀಗೆ ಎಲ್ಲಾ ಋುತುಮಾನದಲ್ಲಿ ಮಾಡುವಂತಹ ರಸಂಗಳಲ್ಲಿಯೂ ಹಲವಾರು ವೈವಿಧ್ಯದ ರಸಂಗಳಿವೆ. ರುಚಿಯಾದ ನಿಂಬೆ ರಸಂ ಅನ್ನು ಅವಸರದ ಸಮಯದಲ್ಲಿಯೂ ಮಾಡಿಕೊಂಡು ತಿನ್ನಬಹುದು. ಹಾಗಾದರೆ ಮಾಡೋದು ಹೇಗೆ ಅಂತಾ ತಿಳಿಸಿಕೊಡ್ತೀವಿ.. ಒಮ್ಮೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
 
* 1 ಕಪ್ ತೊಗರಿಬೇಳೆ 
* 1 ಚಮಚ ಜೀರಿಗೆ ಮತ್ತು ಮೆಣಸಿನಪುಡಿ
* 4 ರಿಂದ 5 ಕರಿಬೇವಿನ ಎಲೆ
* 2 ಹಸಿಮೆಣಸಿನಕಾಯಿ
* ಕೊತ್ತಂಬರಿ
* 1 ನಿಂಬೆಹಣ್ಣು (1/2 ಕಪ್ ನಿಂಬೆರಸ)
* 1/4 ಚಮಚ ಅರಿಶಿನ
* 2 1/2 ಕಪ್ ನೀರು
* ಸ್ವಲ್ಪ ಇಂಗು
* 1/4 ಕಪ್ ಸಾಸಿವೆ
* ಎಣ್ಣೆ, ಉಪ್ಪು, 1/2 ಕಪ್ ಸಕ್ಕರೆ
 
ಮಾಡುವ ವಿಧಾನ :
 
ಮೊದಲೇ 1 ಕಪ್ ತೊಗರಿಬೇಳೆಯನ್ನು ಸ್ವಲ್ಪ ಅರಿಶಿನ ಮತ್ತು 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಬೇಕು. ಬೇಯಿಸಿದ ಬೇಳೆಯನ್ನು ಚೆನ್ನಾಗಿ ಮಸೆದು ಒಂದೆಡೆ ಇಟ್ಟುಕೊಳ್ಳಬೇಕು. ಒಂದು ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಕರಿಬೇವು, ಇಂಗು, ಜೀರಿಗೆ, ಮೆಣಸಿನ ಪುಡಿ, ಹಸಿಮೆಣಸಿನಕಾಯಿ ಮತ್ತು ಅರಿಶಿನ ಬೆರೆಸಿ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಎರಡು ಕಪ್ ನೀರು ಬೆರೆಸಿ ಕುದಿಸಬೇಕು. ಇದಕ್ಕೆ ಈಗಾಗಲೇ ಮಸೆದಿದ್ದ ಬೇಳೆ ಬೆರೆಸಿ ಸ್ವಲ್ಪ ಸಕ್ಕರೆ ಮತ್ತು ರುಚಿಗೆ ತಕ್ಕಂತೆ ಉಪ್ಪನ್ನು ಬೆರೆಸಿ ತಿರುಗಿಸಬೇಕು. ಕೆಲವು ನಿಮಿಷಗಳ ನಂತರ ಒಲೆಯನ್ನು ಆರಿಸಿ ಅದಕ್ಕೆ 1/2 ಕಪ್ ನಿಂಬೆರಸವನ್ನು ಬೆರೆಸಿ ಕದಡಿಸಬೇಕು. ನಂತರ ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿ ಅದರ ಮೇಲೆ ಹಾಕಬೇಕು. ಆಗ ನಿಂಬೆ ರಸ ಸವಿಯಲು ಸಿದ್ಧ. ಈ ರಸಂ ಅನ್ನು ಅನ್ನದ ಜೊತೆಗೂ ಸೇರಿಸಿ ತಿನ್ನಬಹುದು. 

Share this Story:

Follow Webdunia kannada

ಮುಂದಿನ ಸುದ್ದಿ

ಮೊಟ್ಟೆ ಚೆನ್ನಾಗಿ ಬೆಂದಿದೆಯೇ ಎಂದು ತಿಳಿಯಲು ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್