Select Your Language

Notifications

webdunia
webdunia
webdunia
webdunia

ಅಲೂಗಡ್ಡೆಯಿಂದ ಉಪ್ಪಿನಕಾಯಿ ಮಾಡೋದು ಹೇಗೆ ಗೊತ್ತಾ?

ಅಲೂಗಡ್ಡೆಯಿಂದ ಉಪ್ಪಿನಕಾಯಿ ಮಾಡೋದು ಹೇಗೆ ಗೊತ್ತಾ?
ಬೆಂಗಳೂರು , ಮಂಗಳವಾರ, 4 ಸೆಪ್ಟಂಬರ್ 2018 (18:26 IST)
ಆಲೂಗಡ್ಡೆಯಿಂದ ಮಾಡಿದ ಆಹಾರ ಪದಾರ್ಥಗಳು ಯಾರಿಗೆ ಇಷ್ಟ ಇಲ್ಲ ಹೇಳಿ!! ಚಿಕ್ಕ ಮಕ್ಕಳಿಂದ ವಯೊವೃದ್ದರೂ ಸಹ ಆಲೂಗಡ್ಡೆಯನ್ನು ಇಷ್ಟಪಡುತ್ತಾರೆ. ಮತ್ತು ಆಲೂಗಡ್ಡೆಯನ್ನು ಬೇರೆ ಯಾವುದೇ ತರಕಾರಿಯ ಜೊತೆ ಸೇರಿಸಿದರೆ ರುಚಿಯೂ ದುಪ್ಪಟ್ಟಾಗುತ್ತದೆ. ಮಕ್ಕಳಿಗೆ ಇಷ್ಟವಾಗುವ ಲೇಸ್ ಕೂಡಾ ಆಲೂಗಡ್ಡೆಯಿಂದಲೇ ತಯಾರಿಸುತ್ತಾರೆ. 
ಆಲೂಗಡ್ಡೆಯಿಂದ ಆಲೂ ಕರಿ, ಆಲೂ ಪಲ್ಯ, ಗ್ರೇವಿ ಹೀಗೆ ತರತರಹದ ಖಾದ್ಯಗಳನ್ನು ತಯಾರಿಸುತ್ತೇವೆ. ಅದರೆ ಅಲೂಗಡ್ಡೆಯಿಂದ ಉಪ್ಪಿನಕಾಯಿಯನ್ನು ತಯಾರಿಸುವ ವಿಧಾನ ಹಲವರಿಗೆ ತಿಳಿದಿರಲಿಕ್ಕಿಲ್ಲ.. ಹಾಗಾದ್ರೆ ಆಲೂಗಡ್ಡೆ ಉಪ್ಪಿನಕಾಯಿ ಮಾಡೋದು ಹೇಗೆ ಎಂದು ಹೇಳುತ್ತೀವಿ.. ಒಮ್ಮೆ ಟ್ರೈ ಮಾಡಿ ನೋಡಿ.....
 
ಬೇಕಾಗುವ ಸಾಮ್ರಗಿಗಳು:   
 
* 1/2 ಕೆಜಿ ಆಲೂಗಡ್ಡೆ
* 15 ರಿಂದ 20 ಕೆಂಪು ಮೆಣಸಿನಕಾಯಿ (ಹುರಿದ ಒಣ ಕೆಂಪು ಮೆಣಸು)
* ಕೊತ್ತಂಬರಿ ಬೀಜ
* 2 ಚಮಚ ಮೆಂತೆ
* ಚಿಕ್ಕ ಬೌಲ್‌ನಲ್ಲಿ ಹುಣಸೆ ಹುಳಿ
* 3 ಚಮಚ ಸಾಸಿವೆ ಎಣ್ಣೆ
* ಒಂದು ಚಿಟಿಕೆ ಇಂಗು
* ರುಚಿಗೆ ತಕ್ಕಷ್ಟು ಉಪ್ಪು
* ಎಣ್ಣೆ
ಮಾಡುವ ವಿಧಾನ :
 
ಮೊದಲು ಆಲೂಗಡ್ಡೆಯನ್ನು ಕತ್ತರಿಸಿ ಅದರ ಮೇಲೆ ಉಪ್ಪು ಹಾಕಿ ಬದಿಯಲ್ಲಿ ಇಡಬೇಕು. ನಂತರ ಮೆಂತೆ, ಸಾಸಿವೆ ಮತ್ತು ಒಣಮೆಣಸಿನಕಾಯಿ ಹುರಿದು ಅದರ ಜೊತೆ ಹುಣಸೆ ಹುಳಿಯನ್ನು ಸೇರಿಸಿ ಪೇಸ್ಟ್ ರೀತಿ ಮಾಡಬೇಕು. ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದಾಗ ಆಲೂಗಡ್ಡೆ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಚಿಕ್ಕ ಬಾಣಲೆಯಲ್ಲಿ 4 ರಿಂದ 5 ಚಮಚ ಎಣ್ಣೆ ಹಾಕಿ ಅದಕ್ಕೆ ಸ್ವಲ್ಪ ಇಂಗು ಮತ್ತು ಮೆಂತೆ, ಸಾಸಿವೆ ಹುರಿದು ಹುಣಸೆ ಹುಳಿಯನ್ನು ಸೇರಿಸಿ ಮಾಡಿದ ಪೇಸ್ಟ್ ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಹಾಕಬೇಕು. ಈ ಮಿಶ್ರಣಕ್ಕೆ ಆಲೂಗಡ್ಡೆಯನ್ನು ಹಾಕಿ 5 ರಿಂದ 6 ನಿಮಿಷ ಹುರಿಯಬೇಕು. ನಂತರ ಗ್ಯಾಸ್ ಆಫ್ ಮಾಡಿ ಅದು ತಣ್ಣಗಾಗಲು ಬಿಡಬೇಕು. ಆಗ ರುಚಿಕರವಾದ ಆಲೂಗಡ್ಡೆ ಉಪ್ಪಿನಕಾಯಿ ತಿನ್ನಲು ಸಿದ್ಧ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ.. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಹಿ ಗೆಣಸಿನ ಆರೋಗ್ಯಕರ ಲಾಭಗಳು