ರುಚಿಯಾದ ತಾಳಿಪಟ್ಟು ಮಾಡಿ ಸವಿಯಿರಿ..

ಮಂಗಳವಾರ, 4 ಸೆಪ್ಟಂಬರ್ 2018 (15:59 IST)
ಬೆಳಗಿನ ತಿಂಡಿಗೆ ಶೀಘ್ರವಾಗಿ ರೆಡಿ ಮಾಡಬಹುದಾದ ತಿಂಡಿಗಳಲ್ಲಿ ತಾಳಿಪಟ್ಟು ಸಹ ಒಂದು. ಕೇವಲ ಕೆಲವೇ ಸಾಮಗ್ರಿಗಳೊಂದಿಗೆ ಇದನ್ನು ತಯಾರಿಸಬಹುದಾಗಿದ್ದು ರುಚಿಯಾಗಿಯೂ ಇರುತ್ತದೆ. ತಾಳಿಪಟ್ಟು ತಯಾರಿಸುವ ಸರಳ ವಿಧಾನ ಇಲ್ಲಿದೆ,
ಬೇಕಾಗುವ ಸಾಮಗ್ರಿಗಳು:
ಜೋಳದ ಹಿಟ್ಟು - 1 ಕಪ್
ಕಡಲೆ ಹಿಟ್ಟು - 1/4 ಕಪ್
ಅಕ್ಕಿ ಹಿಟ್ಟು - 1/2 ಕಪ್
ಈರುಳ್ಳಿ - 2
ಖಾರದ ಪುಡಿ - 1-2 ಚಮಚ
ಸೌತೆಕಾಯಿ - 1 (ಮಧ್ಯಮ ಗಾತ್ರ)
ಅರಿಶಿಣ ಪುಡಿ - 1/2 ಚಮಚ
ಜೀರಿಗೆ - 1 1/2 ಚಮಚ
ಉಪ್ಪು - ರುಚಿಗೆ
 
ಮಾಡುವ ವಿಧಾನ:
ಈರುಳ್ಳಿ ಮತ್ತು ಸೌತೆಕಾಯಿಯನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಅದಕ್ಕೆ ಖಾರದ ಪುಡಿ, ಉಪ್ಪು, ಜೀರಿಗೆ, ಅರಿಶಿಣ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ಸಮಯದ ನಂತರ ಅದಕ್ಕೆ ಅಕ್ಕಿ, ಜೋಳ ಹಾಗೂ ಕಡಲೆ ಹಿಟ್ಟನ್ನು ಸೇರಿಸಿ, ಅಗತ್ಯವಿರುವಷ್ಟು ನೀರನ್ನು ಹಾಕಿ ಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಿ.
 
ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ. ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಹಾಳೆಯ ಮೇಲೆ ಸ್ವಲ್ಪ ಎಣ್ಣೆಯನ್ನು ಸವರಿ ಕೈಯಿಂದಲೇ ಹಿಟ್ಟಿನ ಉಂಡೆಯನ್ನು ರೊಟ್ಟಿ ತಟ್ಟುವ ಹಾಗೆ ತಟ್ಟಿ. ಹೀಗೆ ಹಿಟ್ಟನ್ನು ತಟ್ಟುವಾಗಲೇ ಪ್ಯಾನ್ ಬಿಸಿ ಮಾಡಿ ಎಣ್ಣೆ ಅಥವಾ ತುಪ್ಪವನ್ನು ಸವರಿ. ನಂತರ ತಟ್ಟಿದ ರೊಟ್ಟಿಯನ್ನು ತವಾ ಮೇಲೆ ಹಾಕಿ ಎರಡೂ ಕಡೆ ಚೆನ್ನಾಗಿ ಬಿಸಿ ಮಾಡಿದರೆ ತಾಳಿಪಟ್ಟು ರೆಡಿಯಾಗುತ್ತದೆ. ತಾಳಿಪಟ್ಟನ್ನು ನೀವು ಬೆಣ್ಣೆ, ಕೊತ್ತಂಬರಿ ಸೊಪ್ಪಿನ ಚಟ್ನಿ ಅಥವಾ ಉಪ್ಪಿನಕಾಯಿ ಜೊತೆ ಸವಿಯಬಹುದು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನೆಲ್ಲಿಕಾಯಿ ಬಳಸಿ ಆರೋಗ್ಯ ವರ್ಧಿಸಿಕೊಳ್ಳಿ