Publish Date: Tue, 27 Oct 2020 (10:15 IST)
Updated Date: Tue, 27 Oct 2020 (10:48 IST)
ಲಕ್ನೋ: ಓಡಿ ಹೋಗಲು ನಿರಾಕರಿಸಿದ ಪ್ರೇಯಸಿಯನ್ನು ಯುವಕನೊಬ್ಬ ಕತ್ತು ಹಿಸುಕಿ ಸಾಯಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಅಪ್ರಾಪ್ತ ಯುವತಿ ಸಾವಿಗೀಡಾಗಿದ್ದು, ಈ ಸಂಬಂಧ ಆರೋಪಿ ಯುವಕನನ್ನು ಬಂಧಿಸಲಾಗಿದೆ. 15 ವರ್ಷದ ದಲಿತ ಯುವತಿ ಜತೆ 20 ವರ್ಷದ ಯುವಕ ಪ್ರೇಮ ಸಂಬಂಧ ಹೊಂದಿದ್ದ. ಇತ್ತೀಚೆಗೆ ಓಡಿ ಹೋಗಿ ಮದುವೆಯಾಗಲು ಒತ್ತಾಯಿಸುತ್ತಿದ್ದ. ಆದರೆ ಆಕೆ ಒಪ್ಪದೇ ಹೋಗಿದ್ದಕ್ಕೆ ಸ್ನೇಹಿತನ ಸಹಾಯದೊಂದಿಗೆ ಆಕೆಯ ಕತ್ತು ಹಿಸುಕಿದ್ದಲ್ಲದೆ, ನಿರ್ಜನ ಪ್ರದೇಶದಲ್ಲಿ ಮೃತದೇಹವನ್ನು ಬಿಸಾಕಿ ಪರಾರಿಯಾಗಿದ್ದ. ಈ ಸಂಬಂಧ ಯುವತಿಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.