Publish Date: Mon, 26 Oct 2020 (10:30 IST)
Updated Date: Mon, 26 Oct 2020 (10:31 IST)
ಮಧ್ಯಪ್ರದೇಶ: ಇಬ್ಬರು ಹೆಂಡಿರ ಗಂಡನೊಬ್ಬ ಪಲ್ಲಂಗದಾಟವನ್ನು ಲೈವ್ ಆಗಿ ಆಪ್ ಗಳಲ್ಲಿ ಹರಿಯಬಿಟ್ಟು ದುಡ್ಡು ಕೊಳ್ಳೆ ಹೊಡೆದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಬೇರೆ ಬೇರೆ ಡೇಟಿಂಗ್ ಆಪ್ ಗಳಲ್ಲಿ ತನ್ನದೇ ಖಾತೆ ತೆರೆದು ವಿಡಿಯೋ ಹರಿಯಬಿಟ್ಟಿದ್ದ ವ್ಯಕ್ತಿ ಇದನ್ನು ವೀಕ್ಷಿಸಲು ಪ್ರತಿಯೊಬ್ಬರಿಂದ 100 ರೂ. ಗಳಂತೆ ವಸೂಲಿ ಮಾಡಿದ್ದ. ಈ ಮೂಲಕವೇ ಲಕ್ಷ ರೂ. ಸಂಪಾದನೆ ಮಾಡಿದ್ದ ಎನ್ನಲಾಗಿದೆ. ಆದರೆ ಈ ವಿಷಯ ಪತ್ನಿಯರಿಗೆ ತಿಳಿಯುತ್ತಿದ್ದಂತೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿ 12 ಲಕ್ಷ ರೂ. ಮೌಲ್ಯದ ಆಭರಣ, ಮೊಬೈಲ್ ಫೋನ್ ನ್ನು ವಶಪಡಿಸಿಕೊಂಡಿದ್ದಾರೆ.