Publish Date: Mon, 05 Oct 2020 (08:52 IST)
Updated Date: Mon, 05 Oct 2020 (13:53 IST)
ಬಿಜ್ನೋರ್ : ತನ್ನ ಭಾವನ ಜೊತೆ ಸಂಬಂಧ ಹೊಂದಿದ್ದ 35 ವರ್ಷದ ಮಹಿಳೆಯೊಬ್ಬಳು ತನ್ನನ್ನು ಅಪಹರಣ ಮಾಡಿದ್ದಾರೆ ಎಂದು ನಾಟಕವಾಡಿ ಪೊಲೀಸರನ್ನು ಹಾಗೂ ಗ್ರಾಮಸ್ಥರನ್ನು ಆಟ ಆಡಿಸಿದ್ದಾಳೆ.
ಮಹಿಳೆ ಮೇವು ಸಂಗ್ರಹಿಸಲು ಹೊಲಕ್ಕೆ ಹೋಗಿದ್ದು, ಅಲ್ಲಿ ತನ್ನನ್ನು ಅಪಹರಣ ಮಾಡಿ ಅತ್ಯಾಚಾರ ಮಾಡಿದ್ದಾರೆ ಎನ್ನುವ ರೀತಿ ಕೂಗಾಡಿದ್ದಾಳೆ. ತಕ್ಷಣ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿ ಆಕೆಯನ್ನು ಹುಡುಕಾಡಿದಾಗ ಆಕೆ ತನ್ನ ಭಾವನ ಜೊತೆ ಸಿಕ್ಕಿಬಿದ್ದಿದ್ದಾಳೆ.
ಮಹಿಳೆ ಅಪಹರಣ ಮಾಡಿದ ರೀತಿ ನಾಟಕವಾಡಿ ಭಾವನ ಬೈಕ್ ಹತ್ತಿ ಪಲಾಯನ ಮಾಡಿದ್ದು,ತಾವಿಬ್ಬರು ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಈ ಬಗ್ಗೆ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.