Publish Date: Sat, 26 Sep 2020 (10:06 IST)
Updated Date: Sat, 26 Sep 2020 (10:08 IST)
ಬೆಂಗಳೂರು: ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ಅನಿಲ್ ಕುಂಬ್ಳೆ ಯಾವಾಗಲೂ ತಮ್ಮ ಫೇವರಿಟ್ ಸಿಂಗರ್ ಎಂದರೆ ಥಟ್ ಅಂತ ಎಸ್ ಪಿ ಬಾಲಸುಬ್ರಮಣ್ಯಂ ಹೆಸರು ಹೇಳುತ್ತಿದ್ದರು. ಬಿಡುವಿನ ವೇಳೆಯಲ್ಲಿ ಅವರ ಹಾಡುಗಳನ್ನು ಕೇಳುತ್ತಿರುತ್ತೇನೆ ಎಂದು ಕುಂಬ್ಳೆ ಆಗಾಗ ಹೇಳುತ್ತಿದ್ದರು.
ಇದೀಗ ತಮ್ಮ ಮೆಚ್ಚಿನ ಗಾಯಕ ಇನ್ನಿಲ್ಲವೆಂಬ ಸುದ್ದಿ ತಿಳಿದು ಕುಂಬ್ಳೆ ಕಂಬನಿ ಮಿಡಿದಿದ್ದಾರೆ. ಸದ್ಯಕ್ಕೆ ಐಪಿಎಲ್ ಟೂರ್ನಿಗಾಗಿ ದುಬೈನಲ್ಲಿರುವ ಕುಂಬ್ಳೆ ಟ್ವಿಟರ್ ಮೂಲಕ ಎಸ್ ಪಿಬಿಗೆ ನುಡಿನಮನ ಸಲ್ಲಿಸಿದ್ದಾರೆ. ‘ಎಸ್ ಪಿ ಬಿ ಸರ್ ಇನ್ನಿಲ್ಲವೆಂಬ ಸುದ್ದಿ ಕೇಳಿ ಆಘಾತವಾಗಿದೆ. ಭಾರತೀಯ ಸಿನೆಮಾದ ದಿಗ್ಗಜ. ಅವರ ಹಾಡುಗಳು ಯಾವತ್ತೂ ಅಮರ. ಅವರ ಸ್ನೇಹ, ಕ್ರಿಕೆಟ್ ಬಗೆಗೆ ಅವರಿಗಿದ್ದ ಪ್ರೀತಿ ಮತ್ತು ಚೆನ್ನೈಯಲ್ಲಿ ಅವರನ್ನು ಭೇಟಿಯಾದ ಗಳಿಗೆ ಎಲ್ಲವೂ ಯಾವತ್ತಿಗೂ ಸ್ಮರಣೀಯವಾಗಿರಲಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು’ ಎಂದು ಕುಂಬ್ಳೆ ಟ್ವೀಟ್ ಮಾಡಿದ್ದಾರೆ.