Select Your Language

Notifications

webdunia
webdunia
webdunia
webdunia

17 ವರ್ಷದ ಬಾಲಕನನ್ನು ಮದುವೆಯಾದ ಯುವತಿ ಅರೆಸ್ಟ್

17 ವರ್ಷದ ಬಾಲಕನನ್ನು ಮದುವೆಯಾದ ಯುವತಿ ಅರೆಸ್ಟ್
ಮುಂಬೈ , ಶನಿವಾರ, 1 ಡಿಸೆಂಬರ್ 2018 (09:33 IST)
ಮುಂಬೈ: ಪುರುಷರು ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿ ಕಂಬಿ ಎಣಿಸಿದ ಪ್ರಕರಣಗಳನ್ನು ನೋಡಿದ್ದೇವೆ. ಇದೀಗ ಮಹಿಳೆಯೊಬ್ಬಳು ಇಂತಹದ್ದೇ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾಳೆ.


ಇದು ನಡೆದಿರುವುದು ಮುಂಬೈಯಲ್ಲಿ. 22 ವರ್ಷದ ಯುವತಿ 17 ವರ್ಷದ ಬಾಲಕನನ್ನು ಮದುವೆಯಾಗಿದ್ದಲ್ಲದೆ, ಅವರಿಗೆ ಈಗ ಐದು ತಿಂಗಳ ಮಗುವೂ ಇದೆ. ಇದೀಗ ಬಾಲಕನ ಮನೆಯವರ ದೂರಿನ ಮೇರೆಗೆ ಯುವತಿ ಮೇಲೆ ಪೊಲೀಸರು ಪೋಸ್ಕೋ ಖಾಯಿದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಯುವತಿ ಇದೀಗ ಜಾಮೀನಿನ ಮೇಲೆ ಹೊರಬರಲು ಪ್ರಯತ್ನ ನಡೆಸಿದ್ದಾಳೆ.

ಕಳೆದ ಎರಡು ವರ್ಷಗಳಿಂದ ಇವರಿಬ್ಬರಿಗೆ ಸಂಬಂಧವಿದೆ ಎನ್ನಲಾಗಿದ್ದು, ಕಳೆದ ವರ್ಷ ಯುವತಿ ತನ್ನ ಪೋಷಕರೊಂದಿಗೆ ಮನೆಗೆ ಬಂದು ನಿಮ್ಮ ಮಗನನ್ನು ನಾನು ಮದುವೆಯಾಗಿದ್ದೇನೆ. ಹೀಗಾಗಿ ಇಲ್ಲಿಯೇ ನೆಲೆಸಲು ನನಗೆ ಅವಕಾಶ ಕೊಡಿ ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಒಡ್ಡಿದ್ದಳು ಎನ್ನಲಾಗಿದೆ.

ಆದರೆ ವಾದ ವಿವಾದದ ನಂತರ ಕೊನೆಗೂ ಯುವತಿ ಮನೆಯಿಂದ ಹೋದ ಮೇಲೆ ಕೆಲವು ಕ್ಷಣಗಳ ನಂತರ ನಮ್ಮ ಮಗನೂ ಅವಳ ಹಿಂದೆ ಹೋಗಿದ್ದ. ಮತ್ತೆ ಮರಳಿ ಬರಲು ಈಗಲೂ ಒಪ್ಪುತ್ತಿಲ್ಲ. ಆ ಮಹಿಳೆ ನನ್ನ ಮಗನಿಗೂ ಆತ್ಮಹತ್ಯೆ ಬೆದರಿಕೆ ಒಡ್ಡಿ ತನ್ನ ಜತೆಗಿಟ್ಟುಕೊಂಡಿದ್ದಾಳೆ ಎಂದು ಬಾಲಕನ ತಾಯಿ ಪೊಲೀಸರಿಗೆ ದೂರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ನನ್ನನ್ನು ಪಾಕಿಸ್ತಾನಕ್ಕೆ ಕಳಿಸಿದ್ದೇ ರಾಹುಲ್ ಗಾಂಧಿ’ -ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು