Select Your Language

Notifications

webdunia
webdunia
webdunia
webdunia

Lucknow: ಸತ್ತೇ ಹೋಗಿದ್ದಾಳೆಂದು ಅಂದುಕೊಂಡಿದ್ದವಳು ಪ್ರಿಯಕರನ ಜೊತೆ ದಿಡೀರ್ ಪ್ರತ್ಯಕ್ಷ

Crime

Krishnaveni K

ಲಕ್ನೋ , ಬುಧವಾರ, 9 ಅಕ್ಟೋಬರ್ 2024 (12:13 IST)
ಲಕ್ನೋ: ಮೂರು ವರ್ಷದ ಹಿಂದೆ ಮೃತಪಟ್ಟಿದ್ದಾಳೆಂದು ಅಂದುಕೊಂಡಿದ್ದ ಮಹಿಳೆ ತನ್ನ ಪ್ರಿಯಕರನ ಜೊತೆ ಪ್ರತ್ಯಕ್ಷಳಾಗಿದ್ದಾಳೆ. ಇಂತಹದ್ದೊಂದು ವಿಚಿತ್ರ ಘಟನೆ ಲಕ್ನೋದಲ್ಲಿ ನಡೆದಿದೆ.

2017 ರಲ್ಲಿ ವಿನಯ್ ಎಂಬಾತನ ಜೊತೆ ಕವಿತಾ ಎಂಬಾಕೆಯ ಮದುವೆಯಾಗಿತ್ತು. ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ 2021 ರಲ್ಲಿ ಇದ್ದಕ್ಕಿದ್ದಂತೆ ಆಕೆ ನಾಪತ್ತೆಯಾಗಿದ್ದಳು. ವಿನಯ್ ಈ ವಿಚಾರವನ್ನು ಕವಿತಾ ಪೋಷಕರಿಗೆ ತಿಳಿಸಿದ್ದ. ಆದರೆ ವಿನಯ್ ಮೇಲೆಯೇ ಕೊಲೆ, ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿದ ಕವಿತಾ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ವಿನಯ್, ಕವಿತಾ ಪೋಷಕರ ವಿರುದ್ಧ ಗೃಹಬಂಧನದಲ್ಲಿರಿಸಿದ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದ. ಆದರೆ ಪೊಲೀಸರು ಕೇಸ್ ತೆಗೆದುಕೊಳ್ಳಲಿಲ್ಲ. ಕೊನೆಗೆ ಆತ ಕೋರ್ಟ್ ಮೆಟ್ಟಿಲೇರಿದ್ದ. ಬಳಿಕ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದರು.

ಪೊಲೀಸರು ತೀವ್ರ ತನಿಖೆ ನಡೆಸಿ ಫೇಸ್ ಬುಕ್ ಮೂಲಕ  ಕವಿತಾ ಬದುಕಿರುವುದನ್ನು ಪತ್ತೆ ಮಾಡಿದ್ದರು. ಅಲ್ಲದೆ, ಇನ್ನೊಬ್ಬನ ಜೊತೆ ಮದುವೆಯಾಗಿ ಲಕ್ನೋದಲ್ಲಿ ಬೀಡುಬಿಟ್ಟಿರುವ ವಿಚಾರ ಪತ್ತೆ ಮಾಡಿದ್ದಾರೆ. ಇದರಿಂದಾಗಿ ವಿನಯ್ ಮೇಲಿದ್ದ ವರದಕ್ಷಿಣೆ ಕಿರುಕುಳ ಕೇಸ್ ಬಿದ್ದು ಹೋಗಿದೆ.

ಇತ್ತ ಅತ್ತೆ-ಮಾವನ ವಿರುದ್ಧ ಗೃಹಬಂಧನ ಕೇಸ್ ಹಾಕಿದ್ದ ವಿನಯ್ ಪ್ರಕರಣವೂ ಮುರಿದುಬಿದ್ದಿದೆ. ಕವಿತಾ ವಿಚಾರಕ್ಕೆ ಅತ್ತೆ-ಮಾವ ಮತ್ತು ಅಳಿಯ ಕಿತ್ತಾಡುತ್ತಿದ್ದರೆ, ಇತ್ತ ಕವಿತಾ ಮಾತ್ರ ತನ್ನ ಪ್ರಿಯಕರನ ಜೊತೆ ನೆಮ್ಮದಿಯಾಗಿ ಜೀವನ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶತಕ ಬಾರಿಸಿದ ಟೊಮೆಟೊ ದರ: ಹೀಗಾಗುತ್ತಿರುವುದು ಎರಡನೇ ಬಾರಿ