Publish Date: Mon, 19 Sep 2022 (08:40 IST)
Updated Date: Mon, 19 Sep 2022 (08:56 IST)
ಆಗ್ರಾ: 7 ನೇ ವಯಸ್ಸಿನಲ್ಲಿ ಸಂಬಂಧಿಕರೊಬ್ಬರಿಂದ ತನ್ನ ಮೇಲೆ ಅತ್ಯಾಚಾರವಾಗಿದೆಯೆಂದು ಮಹಿಳೆ 28 ವರ್ಷಗಳ ಬಳಿಕ ದೂರು ಕೊಟ್ಟ ಘಟನೆ ನಡೆದಿದೆ.
35 ವರ್ಷದ ಮಹಿಳೆ ತನ್ನ ಮೇಲೆ 7 ನೇ ವರ್ಷದಲ್ಲಿ ಲೈಂಗಿಕ ದೌರ್ಜನ್ಯವಾಗಿತ್ತೆಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಆಕೆಯ ಪತಿ, ಮಾಜಿ ಯೋಧ ಬೆಂಬಲಿಸಿದ್ದರಿಂದ ದೂರು ನೀಡಿದ್ದಾಳಂತೆ.
ಮೊದಲು ಮಹಿಳೆಯ ದೂರು ಸ್ವೀಕರಿಸಲು ಪೊಲೀಸರು ಹಿಂಜರಿದಿದ್ದರು. ಆದರೆ ಬಳಿಕ ಸಂತ್ರಸ್ತೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಬಳಿಕ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.