Publish Date: Sat, 17 Sep 2022 (19:56 IST)
Updated Date: Sat, 17 Sep 2022 (20:02 IST)
ಮೈಸೂರಿನಲ್ಲಿ ಹಾಡು ಹಗಲೇ ದರೋಡೆ ನಡೆದಿದೆ. ಮಹಿಳೆಯನ್ನು ಕಟ್ಟಿಹಾಕಿ ಚಿನ್ನ ದೋಚಿ ಖದೀಮರು ಪರಾರಿಯಾದ ಘಟನೆ ಮೈಸೂರಿನ ನಂಜನಗೂಡಿನ ರಾಮಸ್ವಾಮಿ ಬಡಾವಣೆ ಒಂದನೇ ಬ್ಲಾಕ್ನಲ್ಲಿ ನಡೆದಿದೆ. ಪ್ರೌಢಶಾಲಾ ಶಿಕ್ಷಕ ಶಂಭುಸ್ವಾಮಿ ಎಂಬುವವರ ಪತ್ನಿ ದಾಕ್ಷಾಯಿಣಿ ಚಿನ್ನ ಕಳೆದುಕೊಂಡು ಮಹಿಳೆಯಾಗಿದ್ದಾರೆ. ಡೂಪ್ಲಿಕೇಟ್ ಪಾರ್ಸಲ್ ಬಾಕ್ಸ್ ಹಿಡಿದು ಬಂದು ಕಳ್ಳರು, ಪಾರ್ಸಲ್ ಬಂದಿದೆ ಎಂದು ಬಾಗಿಲು ತೆಗೆಯಿಸಿ ಎಂದಿದ್ದಾನೆ. ನಂತರ ಮಹಿಳೆಯನ್ನು ಬೆದರಿಸಿ ಕೈಕಾಲು ಕಟ್ಟಿ ಬಾಯಿಗೆ ಪ್ಲಾಸ್ಟರ್ ಅಂಟಿಸಿ ದರೋಡೆ ಮಾಡಿದ್ದಾರೆ. ಮಹಿಳೆಯ ಮೈ ಮೇಲಿದ್ದ ಚಿನ್ನದ ಮಾಂಗಲ್ಯ ಸರ, ಕೈ ಬಳೆ, ಉಂಗುರ ದೋಚಿ ಪರಾರಿಯಾಗಿದ್ದಾರೆ, ಬೀರುವಿನಲ್ಲಿದ್ದಒಂದು ಜೊತೆ ಕೈ ಬಳೆ, ನೆಕ್ಲೆಸ್ ಸೇರಿ ಒಟ್ಟು 175 ಗ್ರಾಂಗೂ ಅಧಿಕ ಚಿನ್ನದ ಒಡವೆ ದೋಚಿ ಪರಾರಿಯಾಗಿದ್ದಾರೆ. ಮಹಿಳೆ ಒಬ್ಬರೇ ಮನೆಯಲ್ಲಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ನಂಜನಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ