Select Your Language

Notifications

webdunia
webdunia
webdunia
webdunia

ನಕಲಿ ದಾಖಲೆ ದಂಧೆ-ಐವರ ಬಂಧನ

ನಕಲಿ ದಾಖಲೆ ದಂಧೆ-ಐವರ ಬಂಧನ
mysore , ಶನಿವಾರ, 17 ಸೆಪ್ಟಂಬರ್ 2022 (19:16 IST)
ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಹಾಗೂ ಖಾಸಗಿ ಆಸ್ತಿಗಳನ್ನು ಮಾರಾಟ ಮಾಡುತ್ತಿರುವ ಮೈಸೂರು ಕಾಂಗ್ರೆಸ್ ಉಪಾಧ್ಯಕ್ಷ ರಾಜಾರಾಂ ಸೇರಿದಂತೆ ಐವರು ಆರೋಪಿಗಳನ್ನು ಮೈಸೂರಿನ ಕುವೆಂಪು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹಲವು ನಿವೇಶನ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದು, ಕಾರ್ಯಾಚರಣೆ ವೇಳೆ ಖತರ್ನಾಕ್ ತಂಡ ಕೈವಾಡ ತಿಳಿದು ಬಂದಿದೆ. ಅದರಂತೆ ಐವರನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಶಾಸಕ ರಿಜ್ವಾನ್ ಅರ್ಷದ್ ಅವರ ತಂದೆಗೆ ಖತರ್ನಾಕ್ ತಂಡ ಮೋಸ ಮಾಡಿದೆ. ನಗರದ ಉದಯಗಿರಿಯಲ್ಲಿ 
ನಿವೇಶನದ ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡಲಾಗಿದೆ. ನಕಲಿ ದಾಖಲೆ ಸೃಷ್ಟಿಸಲು ವಿವಿಧ ಇಲಾಖೆಗೆ ಸಂಬಂಧಿಸಿದ ಸೀಲ್‌ಗಳನ್ನು ಕೂಡ ಪೋರ್ಜರಿ ಮಾಡಲಾಗಿದೆ. ನಗರದ ರಾಮಕೃಷ್ಟನಗರದ I ಬ್ಲಾಕ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಿವಿಧ ಇಲಾಖೆಗೆ ಸಂಬಂಧಿಸಿದ ಸೀಲ್‌ಗಳು ಮತ್ತು ಇ-ಸ್ಟಾಂಪ್ ಪೇಪರ್, ಸ್ಕ್ಯಾನರ್, ಪ್ರಿಂಟರ್‌ಗಳು ಸೇರಿವೆ. ಪ್ರಕರಣ ಸಂಬಂಧ ನಗರ ಕಾಂಗ್ರೆಸ್ ಉಪಾಧ್ಯಕ್ಷ ರಾಜಾರಾ, ಬೆಂಗಳೂರಿನ ಕಟ್ಟಿಗೇನಹಳ್ಳಿ ನಿವಾಸಿ ಮಹಮ್ಮದ್ ನಯೀಮ್, ಶಹಭಾಜ್ಮ, ಮಲ್ಲಿಕ್, ಭಾಸ್ಕರ್ ಸೇರಿದಂತೆ ಐವರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಪೊಲೀಸರ ತೀವ್ರ ವಿಚಾರಣೆಯ ಆರೋಪಿಗಳು ಈ ಹಿಂದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅನೇಕ ನಿವೇಶನಗಳನ್ನು ಮಾರಾಟ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಂತಿದ್ದ ಬೈಕ್​​, ಕಾರಿಗೆ ಕ್ಯಾಂಟರ್​ ಡಿಕ್ಕಿ, 2 ಸಾವು