Publish Date: Sun, 21 Aug 2022 (21:27 IST)
Updated Date: Sun, 21 Aug 2022 (21:29 IST)
ಚಿರತೆ ಭೇಟೆಯಾಡಿ ಉಗುರು ಮತ್ತು ಹಲ್ಲುಗಳನ್ನು ಸಾಗಿಸುತ್ತಿದ್ದ ಮೂವರು ಭೇಟೆಗಾರರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಜಲ್ಲಿಪಾಳ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಮಿಳುನಾಡು ಮೂಲದ ಜವರಯ್ಯ, ಕೆಂಪ, ತಮ್ಮಯ್ಯ ಬಂಧಿತ ಆರೋಪಿಗಳಾಗಿದ್ದಾರೆ. ಚಿರತೆ ಹಲ್ಲು, ಉಗುರುಗಳನ್ನು ಬಳಸಿ ತಾಯತ ಮಾಡಿಕೊಂಡರೆ ಒಳಿತು ಎಂಬ ಜನರ ಮೂಡನಂಬಿಕೆಯಿಂದ ಈ ಕೃತ್ಯ ಎಸಗಲಾಗ್ತಿದೆ. ಬಂಧನದ ವೇಲೆ ಓರ್ವ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಬಲೆ ಬೀಸಿದ್ದಾರೆ. ಚಿರತೆ ಬೇಟೆಯಾಡಿದ ಸ್ಥಳವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.