Select Your Language

Notifications

webdunia
webdunia
webdunia
webdunia

ರಾಷ್ಟ್ರಧ್ವಜಕ್ಕೆ ಅಪಮಾನಮಾಡಿದ ಶಿಕ್ಷಕನ ವಿರುದ್ಧ ದೂರು

ರಾಷ್ಟ್ರಧ್ವಜಕ್ಕೆ ಅಪಮಾನಮಾಡಿದ ಶಿಕ್ಷಕನ ವಿರುದ್ಧ ದೂರು
ಕಲಘಟಗಿ , ಭಾನುವಾರ, 21 ಆಗಸ್ಟ್ 2022 (21:23 IST)
ರಾಷ್ಟ್ರಧ್ವಜ ಉಲ್ಟಾ ಹಾರಿಸಿದ ಪ್ರಕರಣದ ಹಿನ್ನೆಲೆ ಧ್ವಜ ಕಟ್ಟಿದ ದೈಹಿಕ ಶಿಕ್ಷಕ ಹಾಗೂ ಧ್ವಜಾರೋಹಣ ಮಾಡಿದವರ ವಿರುದ್ಧ ಕಲಘಟಗಿ ಠಾಣೆಯಲ್ಲಿ ದೂರು ದಾಖಲಾಗಿದೆ.ಆಗಷ್ಟ್15ರಂದು, ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದ ಅಂಬೇಡ್ಕರ್ ಪ್ರೌಢ ಶಾಲೆಯಲ್ಲಿ, ದೈಹಿಕ ಶಿಕ್ಷಕ ಪ್ರಕಾಶ ಕುಂಬಾರ ಹಾಗೂ ಶಾಲಾ ಸಮಿತಿ ಅಧ್ಯಕ್ಷ ಲಿಂಗರೆಡ್ಡಿ ನಡುವಿನಮನಿ ಉಲ್ಟಾ ಧ್ವಜ ಹಾರಿಸಿ, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಸ್ವಾತಂತ್ರ್ಯೋತ್ಸವದ ದಿನದಂದು ಉಲ್ಟಾ ಧ್ವಜಾರೋಹಣ ಮಾಡಿದ್ದ ಲಿಂಗರೆಡ್ಡಿ ನಡುವಿನಮನಿ, ಉಲ್ಟಾ ಧ್ವಜ ಕಟ್ಟಿದ್ದ ದೈಹಿಕ ಪ್ರಕಾಶ ಕುಂಬಾರ. ಈ ಇಬ್ಬರ ವಿರುದ್ಧ, ರಾಷ್ಟ್ರಧ್ವಜ ಅಪಮಾನ ಕಲಂ 1971 ಅಡಿಯಲ್ಲಿ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಇನ್ನಾದ್ರೂ ಸಂಬಂಧಿಸಿದ ಅಧಿಕಾರಿಗಳು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಈ ಇಬ್ಬರು ಮೇಲೆ ಸೂಕ್ತ ಕ್ರಮಕ್ಕೆ ಮುಕ್ಕಲ್ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದ ವ್ಯಕ್ತಿ ಮತ್ತೆ ಹಿಂದೂ ಧರ್ಮಕ್ಕೆ ಮತಾಂತರ