Select Your Language

Notifications

webdunia
webdunia
webdunia
webdunia

ಕುಖ್ಯಾತ ಕಳ್ಳನ ಬಂಧನ...!

Notorious thief arrested
bangalore , ಶನಿವಾರ, 20 ಆಗಸ್ಟ್ 2022 (19:07 IST)
ಅಂದು ಚಪ್ಪಲಿ‌ ಕಳವು ಮಾಡ್ತಿದ್ದ ಸಣ್ಣ ಕಳ್ಳ ಇಂದು ಲಕ್ಷ ಲಕ್ಷ ಚಿನ್ನಾಭರಣ ಎಗರಿಸೋ ಕುಖ್ಯಾತ ಮನೆಗಳ್ಳನಾಗಿದ್ದು, ಇದೀಗ ಆರೋಪಿಯನ್ನು HSR ಲೇಔಟ್​​​​ನ ಪೊಲೀಸರು ಬಂಧಿಸಿದ್ದಾರೆ. ಉತ್ತರಹಳ್ಳಿಯ ಪ್ರಕಾಶ್ ಅಲಿಯಾಸ್ ಬಾಲಾಜಿ ಬಂಧಿತ ಆರೋಪಿಯಾಗಿದ್ದಾನೆ. ಮೊದಲಿಗೆ ದೇವಸ್ಥಾನಗಳ ಬಳಿ ಚಪ್ಪಲಿ ಕಳವು ಮಾಡ್ತಿದ್ದ ಈತ ತನ್ನ ತಂದೆ ಸಾವಿನ ಬಳಿಕ ಕಳ್ಳತನ ಕೃತ್ಯವೆಸಗಲು ಮುಂದಾಗಿದ್ನಂತೆ. ಬಳಿಕ ಮನೆ ಕಳವು ಕೃತ್ಯಕ್ಕೆ ಜಂಪ್ ಆಗಿದ್ದು,  ಬಾಡಿಗೆ ಮನೆ ಮಾಡುವ ನೆಪದಲ್ಲಿ ಮನೆಗಳನ್ನು ನೋಡಿ ಕಳ್ಳತನಕ್ಕೆ ಸ್ಕೆಚ್​​ ಹಾಕ್ತಿದ್ನಂತೆ. ಬಾಡಿಗೆಗೆ ಮನೆ ನೋಡುವಾಗ ಮನೆಯ ಬೀಗದ ಪೋಟೋ ತೆಗೆದುಕೊಳ್ತಿದ್ದ ಆರೋಪಿ
ಬಳಿಕ ಬೀಗದ ನಕಲಿ‌ ಕೀ ಮಾಡಿಸಿಕೊಂಡು, ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ಕನ್ನ ಹಾಕ್ತಿದ್ನಂತೆ. ಆರೋಪಿ ಮುರುಗೇಶ್ ಪಾಳ್ಯ ಪಾರ್ಥಿವ್ ಹೈಟ್ಸ್ ಅಪಾರ್ಟ್ಮೆಂಟ್​​​​​ನಲ್ಲಿ ವಾಸವಿದ್ದು, ನಗರದಾದ್ಯಂತ 46 ಕೇಸ್​​​​​ಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಆರೋಪಿ ಬಂಧನದಿಂದ 7 ಮನೆಗಳವು ಪ್ರಕರಣ ಪತ್ತೆಯಾಗಿದ್ದು,  750 ಗ್ರಾಂ ಚಿನ್ನಾಭರಣವನ್ನು ವಶ ಪಡಿಸಿಕೊಳ್ಳಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

40 ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿ ಅರೆಸ್ಟ್