Publish Date: Sat, 20 Aug 2022 (18:55 IST)
Updated Date: Sat, 20 Aug 2022 (18:59 IST)
ಅಕ್ರಮಕೋರರಿಗೆ ಹೊಸಪೇಟೆ ನಗರಸಭೆಯು ಬೆಳ್ಳಂಬೆಳಗ್ಗೆಯೇ ಶಾಕ್ ಕೊಟ್ಟಿದ್ದು, ಅಕ್ರಮವಾಗಿ ಕಟ್ಟಿಕೊಂಡಿದ್ದ ಮನೆಯನ್ನು ಜೆಸಿಬಿ ಮೂಲಕ ನೆಲಸಮ ಮಾಡಲಾಗಿದೆ. ಈ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ. ಹೊಸಪೇಟೆ ನಗರದಲ್ಲಿ ಭೂಗಳ್ಳರ ಹಾವಳಿ ಹೆಚ್ಚಾಗಿದ್ದು, ಎಂಪಿ ಪ್ರಕಾಶ್ ನಗರದ ಸರ್ವೇ ನಂಬರ್ 86cy ನಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದ ಮನೆ ನೆಲಸಮ ಮಾಡಲಾಗಿದೆ. ಭೂಗಳ್ಳರನ್ನು ಮಟ್ಟ ಹಾಕುವಲ್ಲಿ ನಗರಸಭೆ ಅಧಿಕಾರಿಗಳ ಯಶಸ್ವಿ ಹೆಜ್ಜೆ ಇಟ್ಟಿದ್ದಾರೆ. ಗ್ರಾಮೀಣ ಪೊಲೀಸರಿಂದ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಹೊಸಪೇಟೆ ನಗರಸಭೆ ಕಮಿಷನರ್ ಮನೋಹರ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.