Select Your Language

Notifications

webdunia
webdunia
webdunia
webdunia

ರಂಭಾಪುರಿ ಶ್ರೀಗಳ ಮುಂದೆ ಮಾಜಿ ಸಿಎಂ ಸಿದ್ಧರಾಮಯ್ಯ ಪಶ್ಚಾತಾಪ ..!

Former CM Siddaramaiah
bangalore , ಶನಿವಾರ, 20 ಆಗಸ್ಟ್ 2022 (17:44 IST)
ರಂಭಾಪುರಿ ಶ್ರೀಗಳ ಮುಂದೆ ಮಾಜಿ ಸಿಎಂ ಸಿದ್ಧರಾಮಯ್ಯ ಪಶ್ಚಾತಾಪ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಅವರಲ್ಲಿ ಸ್ಪಷ್ಟತೆ ಕೇಳಬೇಕು. ಶ್ರೀಗಳ ನಡುವೆ ಹಾಗೂ ಸಿದ್ದರಾಮಯ್ಯ ನಡುವೆ ಯಾವ ಸಂಭಾಷಣೆ ನಡೆದಿದೆ ಎಂದು ಅವರನ್ನೇ ಕೇಳಬೇಕು ಎಂದು ತಿಳಿಸಿದ್ರು. ರಾಜ್ಯದಲ್ಲಿ ಲಿಂಗಾಯತ ಸಮಾಜದ 99 ಉಪಪಂಗಡಗಳಿಗೆ ಸೌಲಭ್ಯ ಸಿಗುತ್ತಿಲ್ಲ. ಲಿಂಗಾಯತ ಉಪಪಂಗಡಗಳಿಗೆ ಶೈಕ್ಷಣಿಕ ಸೌಲಭ್ಯ ಸಿಗಬೇಕು. ಚುನಾವಣೆ ನಂತರ ಎಲ್ಲಾ ಸ್ವಾಮೀಜಿಗಳ ನೇತೃತ್ವದಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗುವುದು. ನಾವು ಯಾವುದೇ ಧರ್ಮ ಒಡೆದಿಲ್ಲ. ಶೈಕ್ಷಣಿಕ ವಿಚಾರವಾಗಿ ಪ್ರಯತ್ನ ಮಾಡಿದ್ದೆವು. ಸೈದ್ದಾಂತಿಕ ವಿಚಾರಗಳು ಎಲ್ಲವೂ ಸರಿಯಿಲ್ಲ.  ಈಗ ರಾಜ್ಯದಲ್ಲಿ ಉಪ ಪಂಗಡಗಳು ಬೇರೆ ಬೇರೆಯಾಗುತ್ತಿವೆ. ಹೀಗಾಗಿ ನಾವು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಧರ್ಮ ಒಡೆಯುವ ಕೆಲಸ ಮಾಡಿಲ್ಲ ಅಂದು ಎಂ.ಬಿ.ಪಾಟೀಲ್​​​​​​​ ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಪಕ್ಷದವರೊಂದಿಗೆ ಓಲೆಕಾರ್ ಮುನಿಸು​​​