ಚಿಕ್ಕಮಗಳೂರು ತಾಲೂಕಿನ ಬಸಾಪುರದಲ್ಲಿ ಮಳೆಹಾನಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ನಾನು ಸತ್ಯ ಹೇಳುವುದನ್ನು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಸಾವರ್ಕರ್ ಕ್ಷಮಾಪಣೆ ಪತ್ರ ಬರೆದುಕೊಟ್ಟು ಜೈಲಿನಿಂದ ಹೊರ ಬಂದವರು. ಅವರ ಫೋಟೋ ಹಿಡಿದುಕೊಂಡು ವೀರ ಸಾವರ್ಕರ್ ಎನ್ನುವವರು ಇವರು ಎಂದು ವ್ಯಂಗ್ಯವಾಡಿದರು. ನಾನು ವಿರೋಧ ಪಕ್ಷದ ನಾಯಕ, ಶ್ಯಾಡೋ ಚೀಫ್ ಮಿನಿಸ್ಟರ್, ನನಗೆ ಭದ್ರತೆ ಕೊಡುವುದು ಸರ್ಕಾರದ ಕರ್ತವ್ಯ. ಪೊಲೀಸರು ಸರಿಯಾದ ಭದ್ರತೆ ಕೊಡಬೇಕು. ನಿನ್ನೆಯ ಘಟನೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದರು. ಗೋ ಬ್ಯಾಕ್ ಅಂದರೆ ನಾನು ಎಲ್ಲಿಗೆ ಹೋಗಲಿ? ಸರ್ಕಾರ ಸತ್ತು ಹೋಗಿದೆ, ಮಾಧುಸ್ವಾಮಿ ಹೇಳಿಕೆ ಇದಕ್ಕೆ ಕನ್ನಡಿ. ನನ್ನ ವಿರುದ್ಧದ ಪ್ರತಿಭಟನೆ ಸರ್ಕಾರದ ಪ್ರಾಯೋಜಿತ, ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿ ಬಿಜೆಪಿ ಇದೆ. ಮಡಿಕೇರಿ ನಂತ್ರ 4 ಕಡೆ ಪ್ರತಿಭಟನೆಗೆ ಸಿದ್ದತೆ ನಡೆದಿತ್ತು. ಗೋ ಬ್ಯಾಕ್ ಅನ್ನಲು ಇಡೀ ರಾಜ್ಯ ಇವರದ್ದೇ, ನಮಗೂ ಹತ್ತು ಜನರನ್ನು ಸೇರಿಸಿ ಗೋ ಬ್ಯಾಕ್ ಸಿಎಂ ಬೊಮ್ಮಾಯಿ ಎನ್ನಬಹುದಲ್ಲವೇ ಎಂದು ಕೇಳಿದರು.