Select Your Language

Notifications

webdunia
webdunia
webdunia
webdunia

ಶಿವಮೊಗ್ಗದಲ್ಲಿ ಆ.23ರವರೆಗೆ ನಿಷೇಧಾಜ್ಞೆ

ಶಿವಮೊಗ್ಗದಲ್ಲಿ ಆ.23ರವರೆಗೆ ನಿಷೇಧಾಜ್ಞೆ
ಸಾವರ್ಕರ್​​​ ಫ್ಲೆಕ್ಸ್​​​ ಗಲಾಟೆಯಿಂದಾಗಿ ಶಿವಮೊಗ್ಗ ಕಾದ ಕೆಂಡದಂತಾಗಿದೆ. ಕೋಮು-ಕೋಮುಗಳ ನಡುವೆ ಯಾವಾಗ ಬೇಕಾದರೂ ಗಲಾಟೆ ನಡೆದು ಶಾಂತಿ ಸೌಹಾರ್ದತೆ ಹಾಳಾಗಬಹುದು ಎಂಬ ಮುನ್ನೆಚ್ಚರಿಕೆಯಿಂದ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಆದರೆ ಜಿಲ್ಲೆಯಲ್ಲಿ ಪರಿಸ್ಥಿತಿ ಸುಧಾರಿಸಿಲ್ಲದ ಕಾರಣ ಮತ್ತೆ ನಿಷೇಧಾಜ್ಞೆಯನ್ನು ಮುಂದುವರಿಸಲಾಗಿದೆ. ಆ. 23ರವರೆಗೆ ಮೂರು ದಿನಗಳ ಕಾಲ ನಿಷೇಧಾಜ್ಞೆ ಮುಂದುವರಿಸಿ ಜಿಲ್ಲಾಧಿಕಾರಿ ಡಾ.ಆರ್​​.ಸೆಲ್ವಮಣಿ ಆದೇಶ ಮಾಡಿದ್ದಾರೆ. ರಾತ್ರಿ 10ರೊಳಗೆ ಅಂಗಡಿಗಳನ್ನು ಮುಚ್ಚಬೇಕು. ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶಿಸುವಂತಿಲ್ಲ ಎಂದು ತಿಳಿಸಲಾಗಿದೆ. ಶಾಂತಿ-ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಿಷೇಧಾಜ್ಞೆಯನ್ನು ಮುಂದುವರಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆಯಲ್ಲಿ ಸೋಲಿಸಲು ಸ್ವಪಕ್ಷದ ನಾಯಕರು ಮಾಡಿದ ತಂತ್ರಗಾರಿಕೆ