Select Your Language

Notifications

webdunia
webdunia
webdunia
webdunia

ಅಮ್ಮ ಫೇವರಿಟ್ ತಿಂಡಿ ಮಾಡುತ್ತಿರಲಿಲ್ಲ ಎಂದು ಯುವತಿ ಹೀಗೆ ಮಾಡೋದಾ?!

ಅಮ್ಮ ಫೇವರಿಟ್ ತಿಂಡಿ ಮಾಡುತ್ತಿರಲಿಲ್ಲ ಎಂದು ಯುವತಿ ಹೀಗೆ ಮಾಡೋದಾ?!
ಡೆಹ್ರಾಡೂನ್ , ಭಾನುವಾರ, 18 ಸೆಪ್ಟಂಬರ್ 2022 (08:40 IST)
ಡೆಹ್ರಾಡೂನ್: ಅಮ್ಮ ಮಾಡುವ ತಿಂಡಿಗೆ ಮಕ್ಕಳು ಕಂಪ್ಲೇಟ್ ಮಾಡುವುದು ಸಹಜ. ಆದರೆ ಇಲ್ಲೊಬ್ಬಳು ಯುವತಿ ಈ ಕಾರಣಕ್ಕೆ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ!

ಅಮ್ಮ ತನ್ನ ಫೇವರಿಟ್ ತಿಂಡಿ ಮಾಡಲಿಲ್ಲವೆಂದು ಬೇಸರಗೊಂಡ 16 ವರ್ಷ ಅಪ್ರಾಪ್ತ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ರಾತ್ರಿ ಊಟಕ್ಕೆ ಅಮ್ಮ ಮಾಡಿದ ಅಡುಗೆ ಇಷ್ಟವಿಲ್ಲವೆಂದು ಮಗಳು ತಗಾದೆ ತೆಗೆದಿದ್ದಳು. ಬಳಿಕ ತನ್ನ ರೂಂಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಎಷ್ಟು ಹೊತ್ತಾದರೂ ಆಕೆ ಬಾಗಿಲು ತೆಗೆಯದೇ ಇದ್ದಾಗ ಗಾಬರಿಗೊಂಡ ಮನೆಯವರು ಬಲವಂತವಾಗಿ ಬಾಗಿಲು ತೆರೆದು ನೋಡಿದಾಗ ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ಸಂಸ್ಥೆಗಳಿಂದಲೇ ಅಕ್ರಮ ಒತ್ತುವರಿಯಾಗುವುದನ್ನ ಒಪ್ಪಿಕೊಂಡ ಬಿಬಿಎಂಪಿ