Select Your Language

Notifications

webdunia
webdunia
webdunia
webdunia

ಮಗಳ ಶವವನ್ನು ಉಪ್ಪಿನಲ್ಲಿರಿಸಿದ್ದ ತಂದೆ!

ಮಗಳ ಶವವನ್ನು ಉಪ್ಪಿನಲ್ಲಿರಿಸಿದ್ದ ತಂದೆ!
ಮುಂಬೈ , ಶನಿವಾರ, 17 ಸೆಪ್ಟಂಬರ್ 2022 (08:50 IST)
ಮುಂಬೈ: ಮಗಳ ಶವದ ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಪಟ್ಟು ಹಿಡಿದ ತಂದೆ ಆಕೆಯ ಶವವನ್ನು 44 ದಿನ ಉಪ್ಪಿನಲ್ಲಿ ಹೂತಿಟ್ಟ ಘಟನೆ ನಡೆದಿದೆ.

ಮಹಾರಾಷ್ಟ್ರದಲ್ಲಿ ಈ ಘಟನೆ ನಡೆದಿದೆ. 21 ವರ್ಷದ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಕೆಯ ಶವದ ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸರು ಪ್ರಕರಣವನ್ನು ಆತ್ಮಹತ್ಯೆಯೆಂದು ಮುಕ್ತಾಯಗೊಳಿಸಿದರು.

ಆದರೆ ತನ್ನ ಮಗಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ತಂದೆ ಆರೋಪಿಸಿದ್ದು, ಈ ಬಗ್ಗೆ ಸರಿಯಾದ ರೀತಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ತಂದೆ ಶವವನ್ನು ಉಪ್ಪಿನಲ್ಲಿ ಕಳೆದ 44 ದಿನಗಳಿಂದ ಹೂತಿಟ್ಟಿದ್ದರು. ಒತ್ತಾಯದ ಮೇರೆಗೆ ಮರು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

8 ವರ್ಷದ ಬಳಿಕ ಪತಿ ಬಗ್ಗೆ ಅಸಲಿ ಸತ್ಯ ತಿಳಿದ ಪತ್ನಿ ಶಾಕ್