Select Your Language

Notifications

webdunia
webdunia
webdunia
webdunia

ಲೋನ್ ಆಪ್ ಕಾಟ ತಡೆಯಲಾಗದೇ ಅಜ್ಜಿಯನ್ನೇ ಕೊಂದ ಮೊಮ್ಮಗಳು

ಲೋನ್ ಆಪ್ ಕಾಟ ತಡೆಯಲಾಗದೇ ಅಜ್ಜಿಯನ್ನೇ ಕೊಂದ ಮೊಮ್ಮಗಳು
ಪುಣೆ , ಶುಕ್ರವಾರ, 16 ಸೆಪ್ಟಂಬರ್ 2022 (09:20 IST)
ಪುಣೆ: ಲೋನ್  ಆಪ್ ಕಾಟ ತಡೆಯಲಾಗದೇ ಹಣಕ್ಕಾಗಿ ಅಜ್ಜಿಯನ್ನೇ ಮೊಮ್ಮಗಳು ಕೊಲೆ ಮಾಡಿದ ಘಟನೆ ನಡೆದಿದೆ.

24 ವರ್ಷದ ಆರೋಪಿ ಯುವತಿ ಲೋನ್ ಆಪ್ ಮೂಲಕ 9 ಸಾವಿರ ಸಾಲ ಮಾಡಿದ್ದಳು. ಇದೀಗ 15 ಸಾವಿರ ರೂ. ಮರುಪಾವತಿಸಬೇಕಾಗಿತ್ತು. ಆದರೆ ಆಕೆಗೆ ಸಾಧ‍್ಯವಾಗಿರಲಿಲ್ಲ. ಹೀಗಾಗಿ ಆಕೆಗೆ ಲೋನ್ ಆಪ್ ನಿಮ್ಮ ಫೋಟೋಗಳನ್ನು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಡುವುದಾಗಿ ಬೆದರಿಕೆ ಹಾಕಿತ್ತು.

ಇದರಿಂದ ಭಯಗೊಂಡ ಯುವತಿ ತನ್ನ 70 ವರ್ಷದ ಅಜ್ಜಿಯನ್ನು ಕೊಂದು ಆಕೆಯ ಆಭರಣಗಳನ್ನು ಮಾರಿ ಸಾಲ ಪಾವತಿಸಿದ್ದಾಳೆ. ಪೊಲೀಸರು ತನಿಖೆ ನಡೆಸಿದಾಗ ನಿಜಾಂಶ ಬಯಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು ರಸ್ತೆ- ಕೆಂಗೇರಿ ಮಾರ್ಗದ ಮೆಟ್ರೋ ಸಂಚಾರದಲ್ಲಿ ತಾಂತ್ರಿಕ ಸಮಸ್ಯೆ