ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಇಂದು ತಾಂತ್ರಿಕ ಸಮಸ್ಯೆ ಉಂಟಾಗಿ ಸಂಚಾರ ವ್ಯತ್ಯಯವಾಗಿದೆ.ಇಂದು ಅರ್ಧ ಗಂಟೆಗೆ ಒಂದು ರೈಲು ಸಂಚಾರ ನಡೆಸಿದರಿಂದ ಪ್ರಯಾಣಿಕರು ಪರದಾಟ ನಡೆಸುವಂತಾಗಿದೆ.
ಇನ್ನೂ ಒನ್ ವೇಯಲ್ಲಿ ಮಾತ್ರ ಸಂಚಾರ ಮಾಡ್ತಿದ್ದ ಮೆಟ್ರೋ ರೈಲಿನಲ್ಲಿ ಮೆಟ್ರೋ ಪ್ರಯಾಣಿಕರು ಪರದಾಡುವ ಸ್ಥಿತಿ ಕೆಲಕಾಲ ನಿರ್ಮಾಣವಾಗಿತ್ತು.ಮೈಸೂರು ರೋಡ್- ಕೆಂಗೇರಿ ಮಾರ್ಗದ ಮೆಟ್ರೋ ಸಂಚಾರದಲ್ಲಿ ತಾಂತ್ರಿಕ ಸಮಸ್ಯೆಕಾಣಿಸಿಕೊಂಡಿದ್ದರಿಂದ ಅಧಿಕಾರಿಗಳು ಕೂಡಲೇ ಸಮಸ್ಯೆಯನ್ನು ಬಗೆಹರಿಸುವ ಮೂಲಕ ನಮ್ಮ ಮೆಟ್ರೋ ಸೇವೆ ಪುನರಾರಂಭ ಮಾಡಿದರು.12 ಗಂಟೆ ಬಳಿಕ ಮೆಟ್ರೋ ಸಂಚಾರ ಮಾಮೂಲಿಯಂತೆ ಆರಂಭವಾಯಿತು.