Publish Date: Thu, 15 Sep 2022 (09:50 IST)
Updated Date: Thu, 15 Sep 2022 (09:58 IST)
ಲಕ್ನೋ: ಹೊತ್ತಿಗೆ ಸರಿಯಾಗಿ ಊಟ ಕೊಡಲಿಲ್ಲ ಎಂಬ ಕಾರಣಕ್ಕೆ ಪತ್ನಿಗೆ ತವಾದಿಂದ ಹೊಡೆದು ಪತಿ ಕೊಲೆ ಮಾಡಿದ ಭೀಕರ ಘಟನೆ ನಡೆದಿದೆ.
ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿರುವ ಪತಿ ರಾತ್ರಿ ಊಟಕ್ಕೆ ಮನೆಗೆ ಬಂದಿದ್ದ. ಆದರೆ ಪತಿ ಬರುವ ವೇಳೆಗೆ ಊಟ ತಯಾರಾಗಿರಲಿಲ್ಲ.
ಇದೇ ಸಿಟ್ಟಿನಲ್ಲಿ ಪತ್ನಿಯ ಜೊತೆ ಜಗಳವಾಡಿ ತವಾದಿಂದ ಹೊಡೆದಿದ್ದಾನೆ. ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ. ದಂಪತಿಗೆ ಓರ್ವ ಪುತ್ರನೂ ಇದ್ದಾನೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.