Select Your Language

Notifications

webdunia
webdunia
webdunia
webdunia

8 ವರ್ಷದ ಬಳಿಕ ಪತಿ ಬಗ್ಗೆ ಅಸಲಿ ಸತ್ಯ ತಿಳಿದ ಪತ್ನಿ ಶಾಕ್

8 ವರ್ಷದ ಬಳಿಕ ಪತಿ ಬಗ್ಗೆ ಅಸಲಿ ಸತ್ಯ ತಿಳಿದ ಪತ್ನಿ ಶಾಕ್
ವಡೋದರ , ಶನಿವಾರ, 17 ಸೆಪ್ಟಂಬರ್ 2022 (08:20 IST)
ವಡೋದರ: ಮದುವೆಯಾಗಿ 8 ವರ್ಷದ ಬಳಿಕ ಪತ್ನಿಗೆ ಪತಿಯ ಅಸಲಿ ರೂಪ ತಿಳಿದು ಶಾಕ್ ಗೊಳಗಾಗದ ಘಟನೆ ಗುಜರಾತ್ ನಲ್ಲಿ ನಡೆದಿದೆ.

2014 ರಲ್ಲಿ ದಂಪತಿ ಮದುವೆಯಾಗಿದ್ದರು. ಆದರೆ ಇದೀಗ ಪತ್ನಿಗೆ ತನ್ನ ಪತಿ ಈ ಮೊದಲು ಒಬ್ಬ ಹೆಣ್ಣಾಗಿದ್ದಳು ಎಂಬ ಸತ್ಯ ತಿಳಿದುಬಂದಿದೆ. ಲಿಂಗ ಪರಿವರ್ತನೆ ಆಪರೇಷನ್ ಮಾಡಿಸಿಕೊಂಡಿದ್ದ ‘ಪತಿ’ಯ ನಿಜ ರೂಪ ತಿಳಿದ ಪತ್ನಿ ಈಗ ಪೊಲೀಸರಿಗೆ ದೂರು ನೀಡಿದ್ದಾಳೆ.

ತನ್ನ ಪತಿ ತನ್ನಿಂದ ಈ ವಿಚಾರ ಮುಚ್ಚಿಟ್ಟು ಮೋಸ ಮಾಡಿದ್ದಾನೆ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾಳೆ. ಪೊಲೀಸರು ಈಗ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊಬೈಲ್ ಫೋನ್‌ಗಳು ಜಪ್ತಿ 105 ಮಂದಿ ಬಂಧನ