Select Your Language

Notifications

webdunia
webdunia
webdunia
webdunia

ಮೊಬೈಲ್ ಫೋನ್‌ಗಳು ಜಪ್ತಿ 105 ಮಂದಿ ಬಂಧನ

ಮೊಬೈಲ್  ಫೋನ್‌ಗಳು ಜಪ್ತಿ  105 ಮಂದಿ ಬಂಧನ
ಬೆಂಗಳೂರು , ಶುಕ್ರವಾರ, 16 ಸೆಪ್ಟಂಬರ್ 2022 (18:30 IST)
ಬೆಂಗಳೂರು ಪಶ್ಚಿಮ ವಲಯದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 928 ಕದ್ದ ಮೊಬೈಲ್ ಫೋನ್‌ಗಳು ಜಪ್ತಿ ಮಾಡಿ 105 ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ , ಕೇಂದ್ರ, ಪಶ್ಚಿಮ, ದಕ್ಷಿಣ, ಹಾಗೂ ಉತ್ತರ ವಿಭಾಗದ ವಿವಿಧ ಠಾಣಾ ವ್ಯಾಪ್ತಿಯ ರಾಜಾಜಿನಗರ, ನಂದಿನಿ ಲೇಔಟ್ ,ಜೆ.ಜೆ.ನಗರ ,ಉಪ್ಪಾರಪೇಟೆ, ಕಬ್ಬನ್ ಪಾರ್ಕ್ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಮೊಬೈಲ್ ರಾಬರಿ ಪ್ರಕರಣಗಳು ದಾಖಲಾಗಿದ್ದವು. ಮೊಬೈಲ್ ಕಳುವು ಪ್ರಕರಣಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ಕೈಗೊಂಡ ಪೊಲೀಸರು ಕಳೆದ 1 ತಿಂಗಳ ಅವಧಿಯಲ್ಲಿ 105 ಜನ ಆರೋಪಿಗಳ ಬಂಧಿಸಿದ್ದಾರೆ. ಮೊಬೈಲ್ ನಲ್ಲಿ ಮಾತನಾಡಿಕೊಂಡು ಹೋಗುವವರನ್ನು ಟಾರ್ಗೇಟ್ ಮಾಡಿ ಬೈಕ್ ನಲ್ಲಿ ಬರುತ್ತಿದ್ದ ಆರೋಪಿಗಳು ಮೊಬೈಲ್ ಕಸಿಯುತ್ತಿದ್ದರು. ಹಾಗೇ ಬಸ್ ಗಳಲ್ಲಿ ಓಡಾಡುವ ಪ್ರಯಾಣಿಕರ ಜೇಬು ಕತ್ತರಿಸಿ ಅಥವಾ ಇನ್ಯಾವುದೋ ಮಾರ್ಗದಲ್ಲಿ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದರು. ಇತ್ತೀಚಿನ ದಿನದಲ್ಲಿ ದುಬಾರಿ ಬೆಲೆಯ ಮೊಬೈಲ್ ರಾಬರಿ ಕೇಸ್ ಗಳು ಹೆಚ್ಚಾಗಿದ್ದವು.

Share this Story:

Follow Webdunia kannada

ಮುಂದಿನ ಸುದ್ದಿ

ಹೆಚ್ಚುವರಿ ಹೆಡ್ ಲೈಟ್ ಬೀಳುತ್ತೆ ದಂಡ ವಾಹನ ಸವಾರರೇ ಎಚ್ಚರ..!!!