Select Your Language

Notifications

webdunia
webdunia
webdunia
Wednesday, 9 April 2025
webdunia

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಜಾಣ ಕುರುಡು ವರ್ತನೆ..!!

Crime
ಬೆಂಗಳೂರು , ಶುಕ್ರವಾರ, 16 ಸೆಪ್ಟಂಬರ್ 2022 (18:20 IST)

ಬೆಂಗಳೂರು-ಹೈದ್ರಬಾದ್ ರಾಷ್ಟ್ರೀಯ ಯ ಹೆದ್ದಾರಿ-44 ಯಲಗಲಹಳ್ಳಿ ಬೆಂಗಳೂರು ರಸ್ತೆ, ಕಣಿವೇನಾರಾಯಣಪುರ ಬೆಂಗಳೂರು ರಸ್ತೆಯನ್ನು ಕ್ರಷರ್ ಮಾಲೀಕರು ಹಾಗೂ ಟಿಪ್ಪರ್ ಮಾಲೀಕರು ಗುತ್ತಿಗೆ ಪಡೆದವರಂತೆ ಬೇಕಾಬಿಟ್ಟಿಯಾಗಿ ಟಿಪ್ಪರ್‌ಗಳನ್ನು ಓಡಿಸುತ್ತಿದ್ದಾರೆ. ರಸ್ತೆ ಸಾರಿಗೆ ನಿಯಮಗಳು, ರಸ್ತೆ ಸುರಕ್ಷಿತ ನಿಯಮಗಳನ್ನು ಯಾವುದೇ ಟಿಪ್ಪರ್‌ಗಳು ಕಾಪಾಡುತ್ತಿಲ್ಲ. ಪೊಲೀಸ್, ಆರ್‌ಟಿಓ, ಕಂದಾಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಜಾಣ ಕುರುಡರಾಗಿದ್ದಾರೆ. ಇನ್ನು ಚಿಕ್ಕಬಳ್ಳಾಪುರ ಜಿಲ್ಲಾ ರಸ್ತೆ ಸುರಕ್ಷತಾ ಪ್ರಾಧಿಕಾರವೂ ಸಹಾ ಕಣ್ಣುಮುಚ್ಚಿ ಕುಳಿತಿದೆ.

ಇದರಿಂದ ಪ್ರತಿದಿನ ಅಪಘಾತ, ಸಾವು-ನೋವುಗಳು ಸಂಭವಿಸುತ್ತಿವೆ. ಟಿಪ್ಪರ್‌ಗಳನ್ನು ನೋಡಿದರೆ ಸಾಕು, ಬೈಕ್, ಕಾರು ಸವಾರರು ಭಯಬೀಳುವಂತಾಗಿದೆ. ಸಾರಿಗೆ ಇಲಾಖೆಯ ಅಧಿಕಾರಿಗಳಂತೂ ತನಗೂ, ಸಾರಿಗೆ ನಿಯಮಗಳಿಗೆ ಸಂಬಂಧವಿಲ್ಲ ಆದರೆ ತಿಂಗಳ ತಿಂಗಳ ಬರುವುದು ಮಾತ್ರ ತಮಗೆ ಬರಬೇಕೆಂದು ಇರೋ ಬರೋ ಟಿಪ್ಪರ್‌ಗಳಿಗೆ ಟೋಕನ್ ಸಿಸ್ಟಮ್ ಮಾಡಿದ್ದಾರೆಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.
ಮಕ್ಕಳ ಚಲನವಲನಗಳ ಬಗ್ಗೆ ಪೋಷಕರು ಎಚ್ಚರವಾಗಿರಬೇಕು

ಮಕ್ಕಳು ಚನ್ನಾಗಿ ವಿದ್ಯಾಭ್ಯಾಸ ಮಾಡಿ, ಶ್ರೇಯಸ್ಸು ಪಡೆಯಲೆಂದು ಅದೆಷ್ಟೋ ತಂದೆ-ತಾಯಿಗಳು ಕಷ್ಟುಪಟ್ಟು ಮಕ್ಕಳನ್ನು ಶಾಲಾ-ಕಾಲೇಜುಗಳಿಗೆ ಕಳುಹಿಸುತ್ತಾರೆ. ತಂದೆ-ತಾಯಿಯ ಶ್ರಮ, ಮಮತೆಯನ್ನು ಅರ್ಥಮಾಡಿಕೊಳ್ಳದ ಕೆಲವು ಯುವಕ-ಯುವತಿಯರು ಕಾಲೇಜಿಗೆ ಚಕ್ಕರ್ ಹಾಕಿ, ಪಿಕ್ನಿಕ್, ಲಾಂಗ್‌ ಡ್ರೈವಿಂಗ್ ಮೋಜು-ಮಸ್ತಿ ಎಂದು ಅಲೆದಾಡಲು ಹೋಗಿ ಹೆಣವಾಗುತ್ತಿರುವ ಉದಾಹರಣೆಗಳು ಇವೆ 


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಪಂಚದ ಶ್ರೀಮಂತ ವ್ಯಕ್ತಿ ಭಾರತೀಯ?