Select Your Language

Notifications

webdunia
webdunia
webdunia
webdunia

ಅನೈತಿಕ ಸಂಬಂಧ ಹೊಂದಿದ್ದ ಪತ್ನಿಯನ್ನು ರೆಡ್​ ಹ್ಯಾಂಡ್ ಯಾಗಿ ಹಿಡಿದ ಪತಿ

webdunia
ಬೆಂಗಳೂರು , ಶುಕ್ರವಾರ, 16 ಸೆಪ್ಟಂಬರ್ 2022 (16:03 IST)
ಅನೈತಿಕ ಸಂಬಂಧ ಹೊಂದಿದ್ದ ಪತ್ನಿಯನ್ನು ಆಕೆಯ ಪತಿ ರೆಡ್​ ಹ್ಯಾಂಡ್​ ಆಗಿ ಹಿಡಿದಿದ್ದಾನೆ. ಮನೆಯಿಂದ ಹೇಳದೆ-ಕೇಳದೆ ಹೋದ ಮಹಿಳೆ ಇನ್ನೊಬ್ಬನೊಂದಿಗೆ ಬೈಕ್​​ನಲ್ಲಿ ಸುತ್ತಾಡುತ್ತಿದ್ದಾಗಲೇ ಪತಿಯ ಕೈಯಲ್ಲಿ ಸಿಕ್ಕಿಬಿದ್ದಿದ್ದಾಳೆ. ಅಂದಹಾಗೇ ಈ ಘಟನೆ ವರದಿಯಾಗಿದ್ದು ಉತ್ತರ ಪ್ರದೇಶದ ಆಗ್ರಾದಿಂದ.
ದಂಪತಿಗೆ ಮದುವೆಯಾಗಿ 10 ವರ್ಷಗಳೇ ಕಳೆದಿವೆ. ಒಬ್ಬಳು ಪುತ್ರಿಯೂ ಇದ್ದಾಳೆ. ಆದರೆ ಇತ್ತೀಚೆಗೆ ಹಲವು ದಿನಗಳಿಂದ ಗಂಡ-ಹೆಂಡತಿ ಮಧ್ಯೆ ಇನ್ನಿಲ್ಲದ ಜಗಳ ಶುರುವಾಗಿತ್ತು. ಸಣ್ಣಸಣ್ಣದಕ್ಕೂ ಕೋಪ-ಗಲಾಟೆ ಮನೆಯಲ್ಲಿ ಸಾಮಾನ್ಯವಾಗಿತ್ತು. ಹಾಗೇ ಸೆಪ್ಟೆಂಬರ್​ 11ರಂದೂ ಕೂಡ ಪತಿ-ಪತ್ನಿ ಜಗಳವಾಡಿದ್ದಾರೆ. ಆಕೆ ತನ್ನ ಗಂಡನೊಂದಿಗೆ ಮಾತಿನ ಚಕಮಕಿ ನಡೆಸಿದ ನಂತರ ಮಗಳಿಗೂ ಹೇಳದೆ ಮನೆಯಿಂದ ಹೊರಹೋಗಿದ್ದಳು. ಅವಳು ಮನೆಯಿಂದ ಹೊರಹೋಗಿ ಎಷ್ಟೇ ಹೊತ್ತಾದರೂ ಮನೆಗೆ ವಾಪಸ್ ಬಾರದಾಗ ಆಕೆಯ ಪುತ್ರಿ ಮತ್ತು ಗಂಡ ಆತಂಕದಿಂದ ಸುತ್ತಲೂ ಎಲ್ಲ ಕಡೆ ಹುಡುಕಿದ್ದಾರೆ. ಹೀಗೆ ಹುಡುಕುತ್ತ ಹೋದ ಪತಿಗೆ ತನ್ನ ಹೆಂಡತಿ ಇನ್ನೊಬ್ಬನೊಂದಿಗೆ ಆಗ್ರಾದ ಕೈಲಾಶ್​ ಮಂದಿರ್​ ರಸ್ತೆಯಲ್ಲಿ ಸ್ಕೂಟರ್​​ನಲ್ಲಿ ಹೋಗುತ್ತಿರುವುದು ಕಣ್ಣಿಗೆ ಬಿದ್ದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಸಚಿವ ಶ್ರೀ ರಾಮುಲು ಅಸ್ತು